ಯವತ್ಮಾಲ್(ಮಹಾರಾಷ್ಟ್ರ): ಜಿಲ್ಲೆಯ ರಾಲೆಗಾಂವ್ ಬಳಿಯ ಶಿವರಿ ಎಂಬಲ್ಲಿ ಇಂದು ಬೆಳಗ್ಗೆ ಮಿಂಚು ಬಡಿದು ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿಯಿಂದ ರಾಲೆಗಾಂವ್ನಲ್ಲಿ ಧಾರಾಕಾರ ಮಳೆಯಾಗಿದ್ದು, ಈ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹೀಗಾಗಿ ಸಿಡಲು ಅಥವಾ ಮಿಂಚು ಬಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಒಂದೇ ಕುಟುಂಬದ ಎಲ್ಲರೂ ಸಾವನ್ನಪ್ಪಿದ್ದಾರೆ. ಮೃತದಲ್ಲಿ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಅಭಿಮಾನ್ (50), ಲಕ್ಷ್ಮಣ್ ಕೊಯೂರ್ (50), ಸುಭಾಷ್ ನೆಹ್ರೆ (35), ಸಾಹೇಬ್ರಾವ್ ಡಿಯೊನಾರೆ (35), ಪಿಸಾಬಾಯಿ ಡಿಯೊನಾರೆ (30), ಮಂದಾಬಾಯಿ ಅಂಬದಾರೆ (35) ಮೃತರು.
ಘಟನೆ ತಿಳಿದ ಬಳಿಕ ರಾಲೆಗಾಂವ್ ತಹಶೀಲ್ದಾರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೇ ಮನೆಯಲ್ಲಿ 50 ಹಸುಗಳಿದ್ದು, ಯಾವುದೇ ಹಸುಗಳು ಸತ್ತಿಲ್ಲವಂತೆ.