ETV Bharat / bharat

ಕುಲ್ಗಾಂನಲ್ಲಿ ಉಗ್ರರ ಅಟ್ಟಹಾಸ:  ಐವರು ವಲಸಿಗ ಕೆಲಸಗಾರರ ಮೇಲೆ ದಾಳಿ: ಹತ್ಯೆ - ಪಶ್ಚಿಮ ಬಂಗಾಳದ ಕೆಲಸಗಾರರ ಮೇಲೆ ಉಗ್ರ ದಾಳಿ

ಪಶ್ಚಿಮ ಬಂಗಾಳದಿಂದ ಕೆಲಸಗಾರರಾಗಿ ಬಂದಿದ್ದ ಐವರನ್ನು ಉಗ್ರರು ಕೊಂದು ಹಾಕಿದ್ದಾರೆ. ದಕ್ಷಿಣ ಕಾಶ್ಮೀರದ  ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಒಬ್ಬ ಕೆಲಸಗಾರ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟ  ನಡೆಸುತ್ತಿದ್ದಾನೆ.

ಕುಲ್ಗಾಂ ವಲಸಿಗರ ಮೇಲೆ ಉಗ್ರರ ದಾಳಿ
author img

By

Published : Oct 30, 2019, 8:05 AM IST

ಶ್ರೀನಗರ: ಪಶ್ಚಿಮ ಬಂಗಾಳದಿಂದ ಕೆಲಸಗಾರರಾಗಿ ಬಂದಿದ್ದ ಐವರನ್ನು ಉಗ್ರರು ಕೊಂದು ಹಾಕಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಒಬ್ಬ ಕೆಲಸಗಾರ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ.

ಕೊಲ್ಲಲ್ಪಟ್ಟಿರುವ ಐವರು ಪಶ್ಚಿಮ ಬಂಗಾಳ ಮುರ್ಶಿದಾಬಾದ್​ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಯುರೋಪಿಯನ್​​​ ಯೂನಿಯನ್​​ನ ನಿಯೋಗ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಬಂದಾಗಲೇ ಈ ಹತ್ಯೆಗಳು ನಡೆದಿರುವುದು ಕಳವಳಕಾರಿ ಅಂಶ ಎನ್ನಲಾಗಿದೆ. ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ತೆಗೆದು ಹಾಕಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್​ ಗಳನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಲಾಗಿತ್ತು.

ಉಗ್ರರು ವಿಶೇಷವಾಗಿ ಲಾರಿಗಳು ಹಾಗೂ ಅದರಲ್ಲಿರುವ ಕೆಲಸಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಅದರಲ್ಲೂ ಚಾಲಕರೇ ಉಗ್ರರ ಮೇನ್​ ಟಾರ್ಗೆಟ್​ ಆಗಿದ್ದಾರೆ.

Intro:Body:

ಕುಲ್ಗಾಂನಲ್ಲಿ ಐವರು ವಲಸಿಗರ ಮೇಲೆ ಉಗ್ರರ ದಾಳಿ-ಹತ್ಯೆ 

ಶ್ರೀನಗರ: ಪಶ್ಚಿಮ ಬಂಗಾಳದಿಂದ ಕೆಲಸಗಾರರನ್ನು ಬಂದಿದ್ದ ಐವರನ್ನು ಉಗ್ರರು ಕೊಂದು ಹಾಕಿದ್ದಾರೆ. ದಕ್ಷಿಣ ಕಾಶ್ಮೀರದ  ಕುಲ್ಗಾಂ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.   ಒಬ್ಬ ಕೆಲಸಗಾರ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಜೀವನ್ಮರಣದ ಹೋರಾಟ  ನಡೆಸುತ್ತಿದ್ದಾನೆ. 

ಕೊಲ್ಲಲ್ಪಟ್ಟಿರುವ ಐವರು ಪಶ್ಚಿಮ ಬಂಗಾಳ ಮುರ್ಶಿದಾಬಾದ್​ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಯುರೋಪಿಯನ್​​​ ಯೂನಿಯನ್​​ನ ನಿಯೋಗ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ಬಂದಾಗಲೇ ಈ ಹತ್ಯೆಗಳು ನಡೆದಿರುವುದು ಕಳವಳಕಾರಿ ಅಂಶ ಎನ್ನಲಾಗಿದೆ.  ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಜಮ್ಮು - ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ತೆಗೆದು ಹಾಕಿ ಜಮ್ಮು- ಕಾಶ್ಮೀರ ಹಾಗೂ ಲಡಾಖ್​ ಗಳನ್ನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಲಾಗಿತ್ತು.  

ಉಗ್ರರು ವಿಶೇಷವಾಗಿ ಲಾರಿಗಳು ಹಾಗೂ ಅದರಲ್ಲಿರುವ ಕೆಲಸಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ.  ಅದರಲ್ಲೂ ಚಾಲಕರೇ ಉಗ್ರರ ಮೇನ್​ ಟಾರ್ಗೆಟ್​ ಆಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.