ನವದ್ವಿಪ್(ಪಶ್ಚಿಮ ಬಂಗಾಳ): ಲಾರಿಗೆ ಕಾರು ಡಿಕ್ಕಿಯೊಡೆದು ಐದು ಮಂದಿ ಸಾವಿಗೀಡಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ನದಿಯಾ ಜಿಲ್ಲೆಯ ನವದ್ವಿಪ್ ಎಂಬಲ್ಲಿ ಇಂದು ಮುಂಜಾನೆ ಕಾರೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿಯೊಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತಿದ್ದಾರೆ.