ETV Bharat / bharat

ಕಿವೀಸ್​ ಪಡೆಗೆ ಮತ್ತೊಂದು ನಿರಾಸೆ: ಸೂಪರ್​ ಓವರ್​​ನಲ್ಲೇ 4ನೇ ಟಿ-20 ಗೆದ್ದ ಟೀಂ ಇಂಡಿಯಾ! - ಇಂಡಿಯಾ ವರ್ಸಸ್​ ನ್ಯೂಜಿಲೆಂಡ್​

4ನೇ ಟಿ-20 ಪಂದ್ಯದಲ್ಲೂ ಟೀಂ ಇಂಡಿಯಾ ಸೂಪರ್​​ ಓವರ್​​ ಮೂಲಕ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಸರಣಿಯಲ್ಲಿ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.

team india
ಟೀಂ ಇಂಡಿಯಾ ಗೆಲುವು
author img

By

Published : Jan 31, 2020, 4:51 PM IST

ವೆಲ್ಲಿಂಗ್ಟನ್​​: ಸತತ ಮೂರು ಟಿ-20 ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ನ್ಯೂಜಿಲೆಂಡ್​ ಪಡೆ ನಾಲ್ಕನೇ ಪಂದ್ಯದಲ್ಲೂ ಸೋಲು ಕಂಡಿದ್ದು, ಈ ಮೂಲಕ 5 ಟಿ-20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ.

ಇಲ್ಲಿನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಭಾರತ- ನ್ಯೂಜಿಲ್ಯಾಂಡ್​​ ನಡುವಿನ ನಾಲ್ಕನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಟೀಂ ಇಂಡಿಯಾ 20 ಓವರ್​ನಲ್ಲಿ 165 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್​​ ಕೂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಹೀಗಾಗಿ ಸೂಪರ್​ ಓವರ್​ ನಡೆಸಲಾಯಿತು.

ಸೂಪರ್​ ಓವರ್​​ನಲ್ಲಿ ಬ್ಯಾಟಿಂಗ್​ ನಡೆಸಿದ ನ್ಯೂಜಿಲೆಂಡ್​ ತಂಡ 13ರನ್​ಗಳಿಕೆ ಮಾಡಿ, ಭಾರತದ ಗೆಲುವಿಗೆ 14ರನ್​ಗಳ ಟಾರ್ಗೆಟ್​ ನೀಡಿತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ 5ನೇ ಎಸೆತದಲ್ಲಿ 16ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ. ರಾಹುಲ್​ ಮೊದಲ ಎಸೆತದಲ್ಲೇ ಸಿಕ್ಸರ್​ ಹಾಗೂ ನಂತರದ ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.