ETV Bharat / bharat

ದೇಶದಲ್ಲಿ ಈವರೆಗೆ ಕೋವಿಡ್​ಗೆ 16 ಸಾವಿರ ಬಲಿ: 3 ಲಕ್ಷ ಸೋಂಕಿತರು ಗುಣಮುಖ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,28,859ಕ್ಕೆ ಹಾಗೂ ಮೃತರ ಸಂಖ್ಯೆ 16,095ಕ್ಕೆ ಏರಿಕೆಯಾಗಿದೆ.

corona cases in India
ಕೋವಿಡ್
author img

By

Published : Jun 28, 2020, 10:22 AM IST

ನವದೆಹಲಿ: ಪ್ರಪಂಚದೆಲ್ಲೆಡೆ ಆವರಿಸಿರುವ ಮಹಾಮಾರಿ ಕೊರೊನಾ ವೈರಸ್​ ಭಾರತದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದೆ. ಒಂದೇ ದಿನ ಸುಮಾರು 20 ಸಾವಿರ ಜನರಿಗೆ ಸೋಂಕು ದೃಢವಾಗಿದೆ. ಒಟ್ಟು ಐದು ಲಕ್ಷ ಕೇಸ್​​ಗಳ ಪೈಕಿ ಮೂರು ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 19,906 ಸೋಂಕಿತರು ಪತ್ತೆಯಾಗಿದ್ದು, 410 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 5,28,859ಕ್ಕೆ ಹಾಗೂ ಮೃತರ ಸಂಖ್ಯೆ 16,095ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 3,09,713 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 2,03,051 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಪ್ರಕರಣದಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ 1.6 ಲಕ್ಷ ಮಂದಿಗೆ ವೈರಸ್​ ತಗುಲಿದ್ದು, ಈ ಪೈಕಿ 14,474 ಸೋಂಕಿತರು 20 ವರ್ಷದೊಳಗಿನವರು, 5,103 ಮಂದಿ 10 ವರ್ಷದೊಳಗಿನವರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.