ನವದೆಹಲಿ: ದೇಶದ 400 ಜಿಲ್ಲೆಗಳು ಮಹಾಮಾರಿ ಕೊರೊನಾದಿಂದ ಮುಕ್ತವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ.
ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ದೇಶದ 400 ಜಿಲ್ಲೆಗಳಿಗೆ ಕೊರೊನಾ ಭಾದಿಸಿಲ್ಲ. ಮುಂದಿನ 2-3 ವಾರಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ ಎಂದಿದ್ದಾರೆ.
ಚೀನಾದಲ್ಲಿ ಜನವರಿ 7 ರಂದು ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಸುದ್ದಿ ಹೊರಬೀಳುತ್ತಿದ್ದಂತೆ ಅದಕ್ಕೆ ಪ್ರತಿಕ್ರಿಯಿಸಿದ ವಿಶ್ವದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ನಾವು ಜನವರಿ 8 ರಂದು ನಮ್ಮ ತಜ್ಞರ ಸಭೆ ಕರೆದಿದ್ದೇವೆ. ಜನವರಿ 17 ರಂದು ಆರೋಗ್ಯ ಸಲಹೆಗಳನ್ನು ನೀಡಿದ್ದೇವೆ. ಸದ್ಯ, ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 11,933 ಕ್ಕೇರಿದೆ. ಅದರಲ್ಲಿ 10,197 ಪ್ರಕರಣಗಳು ಸಕ್ರಿಯವಾಗಿದೆ. 1,344 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 392 ಜನರು ವೈರಸ್‌ಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.