ನವದೆಹಲಿ: ಸುಧಾರಿತ ಸಾಮರ್ಥ್ಯ ಹೊಂದಿರುವ 32 ಭೂ ವೀಕ್ಷಣಾ ಸಂವೇದಕಗಳಿದ್ದು (sensors), ಅವು ಪ್ರಸ್ತುತ ಕಕ್ಷೆಯಲ್ಲಿವೆ ಎಂದು ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತವಾಗಿ ಉತ್ತರಿಸಿರುವ ಸಚಿವರು, 2018ರ ಜನವರಿಯಿಂದ ಒಟ್ಟು ಐದು ಭೂ ವೀಕ್ಷಣಾ ಉಪಗ್ರಹಗಳು ಮತ್ತು ಐದು ಸಂವಹನ ಪೇಲೋಡ್‌ಗಳನ್ನು ಬಿಡುಗಡೆ ಮಾಲಾಗಿದೆ ಎಂದು ಹೇಳಿದ್ದಾರೆ.
"ಜನವರಿ 2020ರಿಂದ ಸಂಭವಿಸಿದ ಪ್ರವಾಹ, ಚಂಡಮಾರುತಗಳು ಮತ್ತು ಕಾಳ್ಗಿಚ್ಚಿನಂತಹ ಎಲ್ಲಾ ಪ್ರಮುಖ ವಿಪತ್ತು ಘಟನೆಗಳಿಗೆ ಮಾಹಿತಿ ಒದಗಿಸಲಾಗಿದೆ" ಎಂದು ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ್ದು, ಕಾರ್ಯನಿರ್ವಹಿಸದೆ ಪ್ರಸ್ತುತ ಕಕ್ಷೆಯಲ್ಲಿರುವ ಉಪಗ್ರಹಗಳ ಸಂಖ್ಯೆ 47 ಎಂದು ಸಚಿವರು ಹೇಳಿದರು. ಅವುಗಳಲ್ಲಿ 26 ಉಪಗ್ರಹಗಳು ಕಡಿಮೆ ಭೂ ಕಕ್ಷೆಯಲ್ಲಿ ಮತ್ತು 21 ಜಿಯೋಸಿಂಕ್ರೋನಸ್ ಈಕ್ವಟೋರಿಯಲ್ ಕಕ್ಷೆಯಲ್ಲಿವೆ ಎಂದಿದ್ದಾರೆ.