ETV Bharat / bharat

ದೆಹಲಿ ಏಮ್ಸ್​ನ 30 ಆರೋಗ್ಯ ಸಿಬ್ಬಂದಿಗೆ ಕ್ವಾರಂಟೈನ್.. - ಕ್ವಾರಂಟೈನ್

ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ವಯೋವೃದ್ಧನಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢ ಪಟ್ಟಿರುವುದರಿಂದ ಏಮ್ಸ್​ನ 30 ಆರೋಗ್ಯ ಸಿಬ್ಬಂದಿಗೆ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ.

30 doctors, nurses in AIIMS Delhi advised quarantine

author img

By

Published : Apr 8, 2020, 8:18 PM IST

ನವದೆಹಲಿ : ಇಲ್ಲಿನ ಏಮ್ಸ್​ನಲ್ಲಿ ಕೆಲಸ ಮಾಡುವ ವೈದ್ಯರು, ನರ್ಸ್​ ಹಾಗೂ ತಂತ್ರಜ್ಞರು ಸೇರಿ 30 ಜನರಿಗೆ ಕ್ವಾರಂಟೈನ್​ನಲ್ಲಿರುವಂತೆ ಸೂಚಿಸಲಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ 72 ವರ್ಷದ ವೃದ್ಧನೊಬ್ಬನಿಗೆ ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ನರದೌರ್ಬಲ್ಯ ಸಮಸ್ಯೆಯ ಚಿಕಿತ್ಸೆಗಾಗಿ ಬಂದ ರೋಗಿಯು ಉಸಿರಾಟದ ತೊಂದರೆಯಿಂದಲೂ ಬಳಲುತ್ತಿರುವುದು ಗಮನಕ್ಕೆ ಬಂದ ನಂತರ ಆತನಿಗೆ ಕೋವಿಡ್​-19 ಟೆಸ್ಟ್​ ನಡೆಸಲಾಗಿತ್ತು. ಟೆಸ್ಟ್​ನಲ್ಲಿ ಕೋವಿಡ್​-19 ಪಾಸಿಟಿವ್ ಬಂದಿತ್ತು. ತಕ್ಷಣ ರೋಗಿಯನ್ನು ಏಮ್ಸ್​ನ ಮೀಸಲು ಕೋವಿಡ್-19​ ವಿಭಾಗಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಮಧ್ಯೆ ರೋಗಿಯ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ರೋಗಿಯು ಮೊದಲು ದಾಖಲಾಗಿದ್ದ ನ್ಯೂರಾಲಜಿ ವಿಭಾಗವನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದೆ. ಕೋವಿಡ್​ ಸೋಂಕಿತ ರೋಗಿಯ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.