ಪಾಲ್ಘರ್ (ಮಹಾರಾಷ್ಟ್ರ): ನಿನ್ನೆ ರಾತ್ರಿ 10.45ರ ಸುಮಾರಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ತಲಸಾರಿ ತಾಲೂಕಿನಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ತಲಸಾರಿ ತಾಲೂಕಿನ ಅಚ್ಛಡ್, ಧುಂಡಲ್ವಾಡಿ, ಅಂಬೋಲಿ, ಬಹಾರೆ ಪ್ರದೇಶಗಳಲ್ಲಿ ಹಾಗೂ ಕಾಸಾ, ಸೂರ್ಯನಗರ, ಧನಿವರಿ, ದಹನು, ಉರ್ಸೆ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ ಎಂದು ನಾಗರಿಕರು ಮಾಹಿತಿ ನೀಡಿದ್ದಾರೆ. ಭೂಕಂಪದ ಹಿನ್ನೆಲೆ ಯಾವುದೇ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ಆಗಿಲ್ಲ ಎಂದು ಪಾಲ್ಘರ್ ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ.
ಇದಕ್ಕೂ ಮೊದಲು ಪಾಲ್ಘರ್ ಜಿಲ್ಲೆಯಲ್ಲಿ ಅನೇಕ ಬಾರಿ ಭೂಕಂಪನ ಸಂಭವಿಸಿದೆ. 2018ರಿಂದ ಪಾಲ್ಘರ್ ಜಿಲ್ಲೆಯಲ್ಲಿ ಕಡಿಮೆ ಮತ್ತು ಮಧ್ಯಮ ತೀವ್ರತೆಯ ಭೂಕಂಪಗಳು ಸಂಭವಿಸುತ್ತಲೇ ಇವೆ.