ಜಮ್ಮುಕಾಶ್ಮೀರ: ಕಣಿವೆ ರಾಜ್ಯದ 5 ಜಿಲ್ಲೆಗಳಲ್ಲಿ 2G ಮೊಬೈಲ್ ಇಂಟರ್ನೆಟ್ ಸೇವೆ ಪುನರಾರಂಭಗೊಂಡಿದೆ. 370ನೇ ವಿಧಿ ರದ್ಧತಿ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಜಮ್ಮುಕಾಶ್ಮೀರದಲ್ಲಿ 370 ವಿಧಿ ರದ್ಧತಿ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗಿನಿಂದ ಜಮ್ಮು, ರೆಯಸಿ, ಸಂಬಾ, ಕಾಥುವಾ ಹಾಗೂ ಉಧಾಂಪುರ ಜಿಲ್ಲೆಗಳಲ್ಲಿ 2G ಇಂಟರ್ನೆಟ್ ಸೇವೆ ಆರಂಭಗೊಂಡಿದೆ. ಭದ್ರತೆ ಹಿನ್ನೆಲೆಯಲ್ಲಿ ಆ.5ರಿಂದ ಇಂಟರ್ನೆಟ್ ಸ್ಥಗಿತಗೊಂಡಿತ್ತು.
-
2G mobile internet services restored in JAMMU, REASI, SAMBA, KATHUA, & UDHAMPUR. #JammuAndKashmir pic.twitter.com/FqJUAZL3rf
— ANI (@ANI) August 17, 2019 " class="align-text-top noRightClick twitterSection" data="
">2G mobile internet services restored in JAMMU, REASI, SAMBA, KATHUA, & UDHAMPUR. #JammuAndKashmir pic.twitter.com/FqJUAZL3rf
— ANI (@ANI) August 17, 20192G mobile internet services restored in JAMMU, REASI, SAMBA, KATHUA, & UDHAMPUR. #JammuAndKashmir pic.twitter.com/FqJUAZL3rf
— ANI (@ANI) August 17, 2019
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಹಂತಹಂತವಾಗಿ ಮತ್ತು ಕ್ರಮೇಣವಾಗಿ ಸಡಿಲಗೊಳಿಸಲು ಸರ್ಕಾರವು ಶುಕ್ರವಾರ ನಿರ್ಧರಿಸಿತ್ತು. ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಹಿನ್ನೆಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಪುನರ್ ಪರಿಶೀಲಿಸಿ, ಕಾನೂನು ಸುವ್ಯವಸ್ಥೆಯ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಂ ತಿಳಿಸಿದ್ದಾರೆ.