ಜೈಪುರ (ರಾಜಸ್ಥಾನ): ಒಂದೇ ಕುಟುಂಬದ 26 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಇಲ್ಲಿನ ದರಿಬಾ ಮೋಟಿ ಕಟ್ಲಾ ರಾಮಗಂಜ್ ಪ್ರದೇಶದಲ್ಲಿರುವ ಒಂದೇ ಮನೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಏಕಕಾಲಕ್ಕೆ ಇಷ್ಟು ಪ್ರಮಾಣದಲ್ಲಿ ಒಂದೇ ಮನೆಯಿಂದ ಸೋಂಕಿತರು ಪತ್ತೆಯಾಗಿದ್ದಾರೆ. 26 ಜನರಲ್ಲಿ ಸೋಂಕು ಪತ್ತೆಯಾದ ತಕ್ಷಣ ಅವರೆಲ್ಲರನ್ನೂ ತಡರಾತ್ರಿ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈವರೆಗೆ ಜೈಪುರ ನಗರವೊಂದರಲ್ಲೇ 2,260 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.