ಕುಲು(ಹಿಮಾಚಲ ಪ್ರದೇಶ): ಸುಮಾರು ಅರವತ್ತಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಕುಲು ಜಿಲ್ಲೆಯ ಬಂಜಾರ್ ಪ್ರದೇಶದಲ್ಲಿ ಸುಮಾರು 500 ಅಡಿಗಳಷ್ಟು ಆಳದ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ.
ಹತ್ತಾರು ಪ್ರಯಾಣಿಕರು ಬಸ್ ಮೇಲ್ಭಾಗದಲ್ಲಿ ಪ್ರಯಾಣಿಸುತ್ತಿದ್ದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ದುರ್ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಪ್ರಪಾತಕ್ಕೆ ಬಿದ್ದಿರುವ ಬಸ್ ಬಂಜಾರ್ನಿಂದ ಗಡಾಗುಶಾನಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.