ETV Bharat / bharat

ಅಧಿವೇಶನ ಆರಂಭಕ್ಕೆ ಎರಡು ದಿನ... ಪಂಜಾಬ್​​ನಲ್ಲಿ 23 ಶಾಸಕರಿಗೆ ಕೊರೊನಾ!

ಪಂಜಾಬ್​ನಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಇಲ್ಲಿಯವರೆಗೆ ಬರೋಬ್ಬರಿ 23 ಶಾಸಕರಲ್ಲಿ ಈ ಮಹಾಮಾರಿ ಸೋಂಕು ಕಾಣಿಸಿಕೊಂಡಿದೆ.

Punjab MLAs Test Covid Positive
Punjab MLAs Test Covid Positive
author img

By

Published : Aug 26, 2020, 6:57 PM IST

ಚಂಡೀಗಢ(ಪಂಜಾಬ್​): ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಪಂಜಾಬ್​ನಲ್ಲೂ ಇದರ ಹಾವಳಿ ಜೋರಾಗಿದ್ದು , ಇದೇ ಕಾರಣಕ್ಕಾಗಿ ರಾತ್ರಿ ವೇಳೆ ಕರ್ಫ್ಯೂ ವಿಧಿಸಲಾಗಿದೆ.

ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಂಜಾಬ್​ನ 117 ಶಾಸಕರಲ್ಲಿ ಇಲ್ಲಿಯವರೆಗೆ 23 ಎಂಎಲ್​ಎಗಳಿಗೆ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್​​ ಆಗಿದೆ. ಆಗಸ್ಟ್​ 28ರಂದು ಕೇವಲ ಒಂದು ದಿನದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಈ ಮಾಹಿತಿ ನೀಡಿದ್ದಾರೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ತೃಪ್ತಿ ರಾಜೇಂದ್ರ ಬಿಜ್ವಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಇದಾದ ಬಳಿಕ ಸಚಿವರಾದ ಸುಖಜಿಂದರ್​​ ಸಿಂಗ್​​, ಗುರುಪಿತ್​​ ಕಾಂಗ್ರಾ, ಶ್ಯಾಮ ಸುಂದರ್​​ ಅರೊರ್​​ಗೂ ಸೋಂಕು ತಗುಲಿತ್ತು. ತದನಂತರ ವಿಧಾನಸಭೆ ಡೆಪ್ಯುಟಿ ಸ್ಪೀಕರ್​​ ಅಜಬೈ ಸಿಂಗ್​​ ಭಾಟಿ ಅವರಿಗೂ ಸೋಂಕು ಕಾಣಿಸಿಕೊಂಡಿದೆ.

ಯಾರಿಗೆಲ್ಲ ಸೋಂಕು?

ಕಾಂಗ್ರೆಸ್​ ಶಾಸಕರಾದ ಪ್ರಗತ್​ ಸಿಂಗ್​, ಮದನ್​ ಲಾಲ್​​ ಜಲಾಲಪುರ್​​, ಹರ್ದಯಾಲ್​​, ಆಮ್​ ಆದ್ಮಿ ಪಕ್ಷದ ಮಂಜೀತ್​​ ಸಿಂಗ್​, ಕುಲ್ವತ್​ ಸಿಂತ್​​ ಹಾಗೂ ನಜೀರ್​ ಸಿಂಗ್​​ ಅಕಾಲಿ ದಳದ ಮನಪ್ರೀತ್​​ ಸಿಂಗ್​,ಕನ್ವರ್ಜಿತ್​​​ ಸಿಂಗ್​, ಲಕ್ಬೀರ್​ ಸಿಂಗ್​, ಹರೀಂದರ್​ ಪಾಲ್​ ಹಾಗೂ ಗುರುಪ್ರತಾಪ್​​ ಸಿಂಗ್​​ ಅವರಲ್ಲೂ ಕೊರೊನಾ ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.