ETV Bharat / bharat

ಮುಂಬೈನಲ್ಲಿ 23 ಅಕ್ರಮ ಬಾಂಗ್ಲಾ ವಲಸಿಗರ ಬಂಧನ - ಮಾನವ ಕಳ್ಳ ಸಾಗಾಣಿಕ ನಿಗ್ರಹ ದಳ

ಮಹಾರಾಷ್ಟ್ರದ ಪಲ್ಗಾರ್​ ಜಿಲ್ಲೆಯ ಅರ್ನಾಲ್ ಬೀಚ್​ನಲ್ಲಿ ವಿರಾರ್​ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಮತ್ತು ಮಾನವ ಕಳ್ಳ ಸಾಗಾಣಿಕ ನಿಗ್ರಹ ದಳ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಅಪ್ರಾಪ್ತ ಸೇರಿ 23 ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದೆ.

Bangladeshi illegal migrants
ಮುಂಬೈನಲ್ಲಿ 23 ಬಾಂಗ್ಲಾ ಅಕ್ರಮ ವಲಸಿಗರ ಬಂಧನ
author img

By

Published : Feb 12, 2020, 2:53 PM IST

ಮುಂಬೈ: ಮಹಾರಾಷ್ಟ್ರದ ಪಲ್ಗಾರ್​ ಜಿಲ್ಲೆಯ ಅರ್ನಾಲ್ ಬೀಚ್​ನಲ್ಲಿ ವಿರಾರ್​ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಮತ್ತು ಮಾನವ ಕಳ್ಳ ಸಾಗಾಣಿಕ ನಿಗ್ರಹ ದಳ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಅಪ್ರಾಪ್ತ ಸೇರಿ 23 ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದೆ.

ಬಂಧಿತರಲ್ಲಿ ಕೆಲವರು ಮರಾಠಿ ಭಾಷೆ ಮಾತನಾಡುತ್ತಿದ್ದು, ಎಲ್ಲರೂ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ತಿಳಿದು ಬಂದಿದೆ. ವಿರಾರ್​ ಮುಂಬೈ ನಗರದಿಂದ 65 ಕಿ.ಮೀ ದೂರದಲ್ಲಿದೆ.

ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಸಹಕಾರದಲ್ಲಿ ಎಟಿಎಸ್​ ಅಧಿಕಾರಿ ಮನ್ ಸಿಂಗ್​ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಅಕ್ರಮ ವಲಸಿಗರನ್ನು ಬಂಧಿಸಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ವಿರಾರ್​ ಪೊಲೀಸ್​ ಅಧಿಕಾರಿ ಭಾಸ್ಕರ್​ ಪುಕ್ಲೆ ಭೇಟಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಅರ್ನಾಲ್ ಮತ್ತು ಕಲಂಬ ಪ್ರದೇಶದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್​ಎಸ್​) ಮುಖ್ಯಸ್ಥರಾದ ಸಂಜಯ್​ ಮೆಹ್ರಾ ಪೊಲೀಸರಿಗೆ ಸಾಥ್​ ನೀಡಿದ್ದಾರೆ. ಅರ್ನಾಲ್ ಪೊಲೀಸ್​ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.