ನವದೆಹಲಿ: ಫ್ರಾನ್ಸ್ನಲ್ಲಿ ಇಸ್ಲಾಂ ಮೂಲಭೂತವಾದಿಗಳ ದಾಳಿ ಹಾಗೂ ಆ ದಾಳಿಯನ್ನು ಖಂಡಿಸಿ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರ ಪರ- ವಿರೋಧವವಾಗಿ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಭಾರತದ 22 ಮಾಜಿ ರಾಯಭಾರಿಗಳ ಗುಂಪು ಫ್ರಾನ್ಸ್ಗೆ ಬೆಂಬಲ ವ್ಯಕ್ತಪಡಿಸಿದೆ.
ಇಂಥಹ ಕಷ್ಟದ ಸಮಯದಲ್ಲಿ ಫ್ರಾನ್ಸ್ನೊಂದಿಗೆ ನಾವು ನಿಲ್ಲುತ್ತೇವೆ ಎಂದು ಮಾಜಿ ರಾಯಭಾರಿಗಳ ಸಮೂಹ ಹೇಳಿಕೆ ನೀಡಿದ್ದು, ಫ್ರಾನ್ಸ್ನ ಭಯೋತ್ಪಾದಕ ವಿರೋಧಿ ಚಟುಟಿಕೆಗಳಿಗೆ ನಾವು ಕೈಜೋಡಿಸುತ್ತೇವೆ ಎಂದಿದೆ.
2012ರಿಂದ ಸುಮಾರು 260 ಫ್ರೆಂಚ್ ನಾಗರಿಕರನ್ನು ಇಸ್ಲಾಮಿಸ್ಟ್ ಗುಂಪುಗಳು ದಾಳಿ ಮಾಡಿ ಕೊಂದಿದ್ದು, ತಿಂಗಳ ಹಿಂದೆ ಶಿಕ್ಷಕನ ಶಿರಚ್ಛೇಧನ ಮಾಡಿ ಅಟ್ಟಹಾಸ ಮೆರೆಯಲಾಗಿತ್ತು. ಈ ವಿಚಾರಗಳ ಬಗ್ಗೆ ಮಾಜಿ ರಾಯಭಾರಿಗಳ ಸಮೂಹ ಖಂಡನೆ ವ್ಯಕ್ತಪಡಿಸಿದೆ.
ಇಸ್ಲಾಮಿಕ್ ಮೂಲಭೂತವಾದಿಗಳು ಇತ್ತೀಚೆಗೆ ಫ್ರಾನ್ಸ್ನಲ್ಲಿ ನಡೆಸಿದ ಕ್ರೂರ ಭಯೋತ್ಪಾದಕ ದಾಳಿಯು ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಫ್ರಾನ್ಸ್, ಅದರ ಇತಿಹಾಸದ ಕಾರಣದಿಂದಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಳವಡಿಸಿಕೊಂಡಿದೆ. ಆದರೆ ಫ್ರಾನ್ಸ್ನಲ್ಲಿರುವ ಮುಸ್ಲಿಂ ಸಮುದಾಯುಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೇರೆ ರೀತಿಯ ದೃಷ್ಟಿಕೋನದಲ್ಲಿ ನೋಡುತ್ತಿವೆ ಎಂದು ಮಾಜಿ ರಾಯಭಾರಿಗಳು ಹೇಳಿದ್ದಾರೆ.
22 ಮಾಜಿ ರಾಯಭಾರಿಗಳು ಯಾರು?
ಅಜಯ್ ಸ್ವರೂಪ್, ಅಜಿತ್ ಕುಮಾರ್, ಅಮರ್ ಸಿನ್ಹಾ, ಅನಿಲ್ ಕೆ.ತ್ರಿಗುನಾಯತ್, ಅಶೋಕ್ ಕುಮಾರ್, ಭಾಸ್ವತಿ ಮುಖರ್ಜಿ, ಜೆ.ಎಸ್.ಸಪ್ರಾ, ಕನ್ವಾಲ್ ಸಿಬಲ್, ಲಕ್ಷ್ಮಿ ಪುರಿ, ಮೋಹನ್ ಕುಮಾರ್, ಒ.ಪಿ. ಗುಪ್ತಾ, ಪಿನಾಕ್ ರಂಜನ್ ಚಕ್ರವರ್ತಿ, ಪ್ರಕಾಶ್ ಶಾ, ರುಚಿ ಘನ್ಶ್ಯಾಮ್, ಸತೀಶ್ ಚಂದ್ ಮೆಹ್ತಾ, ಶಶಾಂಕ್, ಶ್ಯಾಮ್ಲಾ ಬಿ ಕೌಶಿಕ್, ಸುರೇಶ್ ಕುಮಾರ್ ಗೋಯೆಲ್, ವೀಣಾ ಸಿಕ್ರಿ, ವಿದ್ಯಾಸಾಗರ್ ವರ್ಮಾ, ವಿರೇಂದರ್ ಗುಪ್ತ, ಯೋಗೇಶ್ ಗುಪ್ತಾ