ETV Bharat / bharat

ಫೇಸ್​ಬುಕ್​ ಲವ್​: ಪಾಕ್​​​ ಹುಡುಗಿ ಭೇಟಿಗಾಗಿ ಹೋಗುತ್ತಿದ್ದವ ಗಡಿಯಲ್ಲಿ ಸಿಕ್ಕಿಬಿದ್ದ!

author img

By

Published : Jul 17, 2020, 8:19 PM IST

ಲವರ್​ ಭೇಟಿಯಾಗಲು ಮಹಾರಾಷ್ಟ್ರದಿಂದ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿದ್ದ ಯುವಕನೋರ್ವ ಗಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

20 year old man arreste
20 year old man arreste

ಹೈದರಾಬಾದ್​: ಫೇಸ್​ಬುಕ್​ ಮೂಲಕ ಪರಿಚಯವಾದ ಪಾಕ್​ನ ಯುವತಿ ಭೇಟಿ ಮಾಡಲು ತೆರಳುತ್ತಿದ್ದ ಯುವಕನೋರ್ವ ಗುಜರಾತ್​ನ ಕಚ್​​ ಪ್ರದೇಶದಲ್ಲಿ ಬಿಎಸ್​​ಎಫ್​​ ಯೋಧರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

20 ವರ್ಷದ ಸಿದ್ಧಿಕಿ ಮೊಹಮ್ಮದ್​ ಜಿಸಾನ್ ಮೂಲತಃ ಮಹಾರಾಷ್ಟ್ರದ ​​ ಉಸ್ಮಾನಾಬಾದ್​​ನವನಾಗಿದ್ದು, ಫೇಸ್​ಬುಕ್​ ಮೂಲಕ ಪಾಕಿಸ್ತಾನದ ಹುಡುಗಿ ಜತೆ ಪರಿಚಯವಾಗಿದೆ. ಆಕೆಯೊಂದಿಗೆ ವಾಟ್ಸ್​​ಆ್ಯಪ್​​ನಲ್ಲಿ ಪ್ರತಿದಿನ ಚಾಟ್​ ಮಾಡಲು ಶುರು ಮಾಡಿದ್ದಾನೆ. ಇದಾದ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

ಗೂಗಲ್​ ಮ್ಯಾಪ್​ ಮೂಲಕ ಪಾಕ್​ಗೆ ತೆರಳಲು ನಿರ್ಧರಿಸಿ ಮಹಾರಾಷ್ಟ್ರ ಬಿಟ್ಟಿರುವ ಯುವಕ, ಗುಜರಾತ್​ನ ಕಚ್​​ನ ರಣ್ ಪ್ರದೇಶದಲ್ಲಿ ಬಾರ್ಡರ್​ ಕ್ರಾಸ್​ ಮಾಡ್ತಿದ್ದ ವೇಳೆ ಬಿಎಸ್​ಎಫ್ ಯೋಧರ​​ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಸಂಪೂರ್ಣವಾದ ಮಾಹಿತಿ ನೀಡಿರುವ ಯುವಕ 1200 ಕಿಲೋ ಮೀಟರ್​ ಪ್ರಯಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದಾಗಿ ತಿಳಿಸಿದ್ದಾನೆ. ಈ ವೇಳೆ ಯುವಕನಿಂದ ಎಟಿಎಂ ಕಾರ್ಡ್​, ಆಧಾರ್​ ಕಾರ್ಡ್​ ಸೇರಿದಂತೆ ಇತರೆ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ಗಡಿಯವರೆಗೆ ಬೈಕ್​ನಲ್ಲಿ ಪ್ರಯಾಣ ಮಾಡಿರುವ ಯುವಕ, ಯಾರಿಗೂ ಗೊತ್ತಾಗದಂತೆ ಅದನ್ನ ಮುಚ್ಚಿಟ್ಟಿದ್ದಾನೆ. ಪಾಕ್​ ಬಾರ್ಡರ್​ ದಾಟಲು ಕೇವಲ 1.5 ಕಿಲೋ ಮೀಟರ್​ ದೂರದಲ್ಲಿದ್ದಾಗ ಬಂಧನಕ್ಕೊಳಗಾಗಿದ್ದಾನೆ. ಯುವಕ ನಾಪತ್ತೆಯಾಗಿರುವ ಕುರಿತು ಮಹಾರಾಷ್ಟ್ರ ಪೊಲೀಸ್​ ಠಾಣೆಯಲ್ಲಿ ಪೋಷಕರು ದೂರು ದಾಖಲು ಮಾಡಿದ್ದು, ಗುಜರಾತ್​ ಪೊಲೀಸರು ಈಗಾಗಲೇ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ಶಾ ಫೈಸಲ್​ ಎಂಬಾಕೆ ಪಾಕಿಸ್ತಾನದ ಕರಾಚಿಯಲ್ಲಿ ವಾಸವಿದ್ದು, ಭೇಟಿ ಮಾಡಲು ಬರುವಂತೆ ತಿಳಿಸಿದ್ದಳು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.