ಜೈಪುರ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 20 ದಿನದ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರ್ದ ಜಿ.ಕೆ. ಲೂನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ದಿನದ ಮಗು ಸಾವನ್ನಪ್ಪಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಡೆಡ್ಲಿ ವೈರಸ್ ಕೊರೊನಾದಿಂದ ಸಾವನ್ನಪ್ಪಿರುವ ಅತಿ ಸಣ್ಣ ವಯಸ್ಸಿನ ಮಗು ಇದು ಎಂದು ಹೇಳಲಾಗುತ್ತಿದೆ.
ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಈ ಶಿಶುವನ್ನು ಮೇ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಕೊರೊನಾ ಪರೀಕ್ಷಾ ವರದಿ ಇದೀಗ ಬಂದಿದ್ದು, ವೈರಸ್ನಿಂದಾಗಿ ಸಾವನ್ನಪ್ಪಿರುವುದು ಖಚಿತಗೊಂಡಿದೆ.
ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,666 ಕ್ಕೇರಿದೆ. ಇದರಲ್ಲಿ 1,116 ಜನರು ಗುಣಮುಖರಾಗಿದ್ದು, 62 ಜನರು ಕೊನೆಯುಸಿರೆಳೆದಿದ್ದಾರೆ.