ಜೋಧ್‌ಪುರ (ರಾಜಸ್ಥಾನ): ಶ್ರೀಗಂಗನಗರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರು ಸಾವಿಗೀಡಾಗಿದ್ದಾರೆ.
ಶ್ರೀಗಂಗನಗರ ಜಿಲ್ಲೆಯ ಗಡಿ ಹೊರಠಾಣೆ ಖಯಲಿವಾಲಾದಲ್ಲಿ ಈ ಘಟನೆ ಜರುಗಿದೆ. ಇವರ ಬಳಿ ಇದ್ದ ಪಿಸ್ತೂಲ್, ನಿಯತಕಾಲಿಕೆಗಳು, ಮದ್ದುಗುಂಡುಗಳು, ರಾತ್ರಿ ದೃಷ್ಟಿ ಸಾಧನ, ಪಾಕಿಸ್ತಾನಿ ಕರೆನ್ಸಿ ಮತ್ತು ಗುರುತಿನ ಚೀಟಿ, 8 ಕೆಜಿಯಷ್ಟು ಡ್ರಗ್ಸ್, ಒಂದು ಚಾಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಇನ್ಸ್ಫೆಕ್ಟರ್ ಜನರಲ್ (ಐಜಿ) ಅಮಿತ್ ಲೋಧಾ ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಪಡೆದ ನಂತರ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಇವರ ಮೇಲೆ ಕಾರ್ಯಾಚರಣೆ ನಡೆಸಿದೆ.