ETV Bharat / bharat

ಉತ್ತಮ ಆರೋಗ್ಯಕ್ಕೆ 'ವಾಶ್​' ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ - WASH News

ಅಶುದ್ಧ ನೀರು, ನೈರ್ಮಲ್ಯವಿಲ್ಲದ ಪರಿಸರದಲ್ಲಿ ಕೆಲಸ ಮಾಡುವುದು, ದಾದಿಯರು-ವೈದ್ಯರು ವೈಯಕ್ತಿಕ ರಕ್ಷಣಾ ಸಾಧನಗಳಿಲ್ಲದೆ ಕೆಲಸ ಮಾಡುವುದು ಎರಡೂ ಒಂದೇ ರೀತಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ.ಟೆಡ್ರೊಸ್​ ಅಧಾನೊಮ್​ ಘೆಬ್ರೆಯೆಸಸ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
author img

By

Published : Dec 17, 2020, 10:24 AM IST

ವಿಶ್ವದ ಸುಮಾರು 1.8 ಬಿಲಿಯನ್​ ಜನರು ಕೊರೊನಾ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಇದರ ಅಪಾಯವನ್ನು ಹೆಚ್ಚಿಸಿದ್ದಾರೆ. ಇದಕ್ಕೆ ಕಾರಣ ಉತ್ತಮ ನೀರಿನ ಸೇವೆಗಳಿಲ್ಲದೆ ಕೆಲಸ ಮಾಡುತ್ತಿರುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಕಳವಳ ವ್ಯಕ್ತಪಡಿಸಿದೆ.

"ಅಶುದ್ಧ ನೀರು, ನೈರ್ಮಲ್ಯವಿಲ್ಲದ ಪರಿಸರದಲ್ಲಿ ಕೆಲಸ ಮಾಡುವುದು, ದಾದಿಯರು-ವೈದ್ಯರು ವೈಯಕ್ತಿಕ ರಕ್ಷಣಾ ಸಾಧನಗಳಿಲ್ಲದೆ ಕೆಲಸ ಮಾಡುವುದು ಒಂದೇ ರೀತಿಯಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್​ ಅಧಾನೊಮ್​ ಘೆಬ್ರೆಯೆಸಸ್ ಹೇಳಿದರು. ಕೊರೊನಾ ಸೋಂಕು ತಡೆಗಟ್ಟಲು ಪ್ರಮುಖವಾಗಿ ಶುದ್ದ ನೀರು ಮತ್ತು ಸ್ವಚ್ಛತೆ ಅಗತ್ಯ. ಆದರೆ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಇವುಗಳು ಕಷ್ಟಸಾಧ್ಯ ಎಂದಿದ್ದಾರೆ.

WASH (ವಾಟರ್​, ಸ್ಯಾನಿಟೈಶೇನ್ ಮತ್ತು ಹೈಜಿನ್​) ಕುರಿತ ಜಾಗತಿಕ ಪ್ರಗತಿ ವರದಿ: ಕೊರೊನಾವು, ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿರುವ ಅಸಮರ್ಪಕ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸೇರಿದಂತೆ ಪ್ರಮುಖ ದೋಷಗಳನ್ನು ಬಹಿರಂಗಪಡಿಸುತ್ತದೆ ಎಂದು ಈ ವರದಿ ತಿಳಿಸಿದೆ.

ಆರೋಗ್ಯ ಕಾರ್ಯಕರ್ತರ ಹಾಗೂ ರೋಗಿಗಳ ಸುರಕ್ಷತೆಗೆ ನೀರು, ನೈರ್ಮಲ್ಯ ಮತ್ತು ವಾಶ್ (WASH) ಅತ್ಯಗತ್ಯ. ಆದರೂ ಈ ಸೇವೆಗಳುಗೆ ವಿಶ್ವವ್ಯಾಪಿ ಆದ್ಯತೆ ನೀಡಲಾಗಿಲ್ಲ. 4 ರಲ್ಲಿ 1 ಪಟ್ಟು ನೀರಿನ ಸೌಲಭ್ಯ ಆರೋಗ್ಯ ಸೌಲಭ್ಯಗಳಿಗೆ ಲಭ್ಯವಾಗುತ್ತಿಲ್ಲ. 3 ರಲ್ಲಿ 1 ಪಟ್ಟು ಕೈ ನೈರ್ಮಲ್ಯದ ಕಾಳಜಿಯನ್ನು ಒದಗಿಸಲಾಗಿದೆ. 10 ರಲ್ಲಿ 1ಪಟ್ಟು ಜನರಿಗೆ ನೈರ್ಮಲ್ಯದ ಸೇವೆ ಬಗ್ಗೆ ಕಾಳಜಿಯಿಲ್ಲ. 3 ರಲ್ಲಿ 1 ಪಟ್ಟು ತ್ಯಾಜ್ಯವನ್ನು ಸುರಕ್ಷಿತವಾಗಿ ಬೇರ್ಪಡಿಸುವುದಿಲ್ಲ.

ವಿಶ್ವದ 47 ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ (ಎಲ್‌ಡಿಸಿ) ಪರಿಸ್ಥಿತಿ ಎಲ್ಲಕ್ಕಿಂತ ಕೆಟ್ಟದಾಗಿದೆ. 2 ರಲ್ಲಿ 1ಪಟ್ಟು ಆರೋಗ್ಯ ಸೌಲಭ್ಯಗಳಲ್ಲಿ ಮೂಲ ಕುಡಿಯುವ ನೀರು ಇಲ್ಲ. 4 ರಲ್ಲಿ 1ಪಟ್ಟು ಆರೈಕೆಯ ಹಂತಗಳಲ್ಲಿ ಕೈ ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಿಲ್ಲ. 5 ರಲ್ಲಿ 3 ಪಟ್ಟು ಜನರಿಗೆ ಮೂಲ ನೈರ್ಮಲ್ಯ ಸೇವೆಗಳ ಕೊರತೆಯಿದೆ. ಆದರೆ ಇದನ್ನು ಸರಿಪಡಿಸಬಹುದು. ಆರೋಗ್ಯ ಸೌಲಭ್ಯಗಳಲ್ಲಿ ನೀರಿನ ಸೇವೆಯನ್ನು ಸ್ಥಾಪಿಸಲು ಎಲ್ಲಾ 47 ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಗಳನ್ನು ಶಕ್ತಗೊಳಿಸಲು ಒಬ್ಬ ವ್ಯಕ್ತಿಗೆ 1 ಯುಎಸ್​ಡಿ ವೆಚ್ಚವಾಗಲಿದೆ ಎಂದು ವರದಿಯ ಪ್ರಾಥಮಿಕ ಅಂದಾಜುಗಳು ಸೂಚಿಸುತ್ತವೆ. ಸೇವೆಗಳನ್ನು ನಿರ್ವಹಿಸಲು ಸರಾಸರಿ ಪ್ರತಿ ವರ್ಷ ತಲಾ 0.20 ಡಾಲರ್ ಅಗತ್ಯವಿದೆ. ವರದಿಯ ಪ್ರಕಾರ, ವಾಶ್ (WASH)ನಲ್ಲಿ ಹೆಚ್ಚುತ್ತಿರುವ ಹೂಡಿಕೆಗಳು ದೊಡ್ಡ ಆದಾಯವನ್ನು ಹೊಂದಿವೆ. ಆರೋಗ್ಯ ಸೌಲಭ್ಯಗಳಲ್ಲಿ ನೈರ್ಮಲ್ಯವನ್ನು ಸುಧಾರಿಸುವುದು ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ನಿಭಾಯಿಸಲು “ಉತ್ತಮ ಖರೀದಿ” ಆಗಿದೆ.

ವರದಿಯ ನಾಲ್ಕು ಪ್ರಮುಖ ಶಿಫಾರಸು:

  • ಸೂಕ್ತವಾದ ಹಣಕಾಸಿನೊಂದಿಗೆ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಬೇಕು.
  • ವಾಶ್ ಸೇವೆಗಳು, ಅಭ್ಯಾಸಗಳು ಮತ್ತು ಪರಿಸರವನ್ನು ಸಕ್ರಿಯಗೊಳಿಸುವಲ್ಲಿನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿ ಮತ್ತು ನಿಯಮಿತವಾಗಿ ಪರಿಶೀಲಿಸಬೇಕು
  • ವಾಶ್ ಸೇವೆಗಳನ್ನು ಉಳಿಸಿಕೊಳ್ಳಲು, ಉತ್ತಮ ನೈರ್ಮಲ್ಯವನ್ನು ಉತ್ತೇಜಿಸಲು ಆರೋಗ್ಯ ಕಾರ್ಯಪಡೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬೇಕು.
  • ನಿಯಮಿತ ಆರೋಗ್ಯ ವಲಯದ ಯೋಜನೆ, ಬಜೆಟ್ ಮತ್ತು ಪ್ರೋಗ್ರಾಮಿಂಗ್‌ಗೆ WASHನ್ನು ಸಂಯೋಜಿಸಬೇಕು.

2020ರ ವೇಳೆಗೆ, 130ಕ್ಕೂ ಹೆಚ್ಚು ಪಾಲುದಾರರು ಸಂಪನ್ಮೂಲಗಳನ್ನು ಹೊಂದಿದ್ದಾರೆ. ಅದರಲ್ಲಿ 34 ಮಂದಿ ಮೀಸಲಿಟ್ಟ ಹಣಕಾಸಿನ ಬದ್ಧತೆಗಳನ್ನು ಒಟ್ಟು 125 ಮಿಲಿಯನ್ ಯುಎಸ್​ಡಿ ಮಾಡಿದ್ದಾರೆ. ಡಬ್ಲ್ಯುಎಚ್‌ಒ ಮತ್ತು ಯುನಿಸೆಫ್ ಡೇಟಾವನ್ನು ಹೊಂದಿರುವ ಸುಮಾರು 50 ದೇಶಗಳಲ್ಲಿ, ಶೇಕಡಾ 86 ರಷ್ಟು ಮಾನದಂಡಗಳನ್ನು ನವೀಕರಿಸಿದೆ. 70 ಪ್ರತಿಶತದಷ್ಟು ಜನರು ಆರಂಭಿಕ ಮೌಲ್ಯಮಾಪನಗಳನ್ನು ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.