ಜಮ್ಮು ಕಾಶ್ಮೀರ : ಲೈನ್ ಆಫ್ ಕಂಟ್ರೋಲ್ ಬಳಿ ಸ್ಫೋಟದಲ್ಲಿ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಲ್ಎಸಿಯ ಬಾಲ್ಕೋಟ್ ಸೆಕ್ಟರ್ನಲ್ಲಿ ಸಿಬ್ಬಂದಿ ಗಸ್ತು ತಿರುಗುವ ವೇಳೆಯಲ್ಲಿ ಹುಡುಗಿಸಿ ಇಡಲಾಗಿದ್ದ ಸ್ಫೋಟಕ (anti-personnel mine) ಸಿಡಿದಿದೆ. ಈ ವೇಳೆ ಸೇನಾ ಸಿಬ್ಬಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಆ್ಯಂಟಿ ಪರ್ಸೋನೆಲ್ ಮೈನ್..?
ಆ್ಯಂಟಿ ಪರ್ಸೋನೆಲ್ ಮೈನ್ ಭೂಮಿಯಲ್ಲಿ ಹುದುಗಿಸುವ ಸ್ಫೋಟಕವಾಗಿದ್ದು, ಮಿಲಿಟರಿ ಟ್ಯಾಕ್ಗಳ ವಿರುದ್ಧ ಹಾಗೂ ವಾಹನಗಳ ವಿರುದ್ಧ ಬಳಕೆಯಾಗುತ್ತವೆ. ಈ ಮೈನ್ಗಳನ್ನು ಹೆಚ್ಚಾಗಿ ವ್ಯಕ್ತಿಗಳನ್ನು ಗಾಯಗೊಳಿಸಲು ಬಳಸಲಾಗುತ್ತದೆ.