ETV Bharat / bharat

ಈ ವರ್ಷದಲ್ಲಿ ಬರೋಬ್ಬರಿ 177 ಉಗ್ರರು ಹತ: ಡಿಜಿಪಿ ದಿಲ್ಬಾಗ್​ ಸಿಂಗ್​

author img

By

Published : Sep 17, 2020, 11:55 AM IST

ಶ್ರೀನಗರ ಪ್ರದೇಶವೊಂದರಲ್ಲೇ 16 ಉಗ್ರರು ಸೇರಿ, ಈ ವರ್ಷ ಒಟ್ಟು 177 ಉಗ್ರರನ್ನು ಬೇಟೆಯಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್​ ಸಿಂಗ್​ ತಿಳಿಸಿದ್ದಾರೆ.

J&K DGP Dilbag Singh
ಡಿಜಿಪಿ ದಿಲ್ಬಾಗ್​ ಸಿಂಗ್​

ಶ್ರೀನಗರ: ಈ ವರ್ಷ ನಡೆಸಿದ 72 ಕಾರ್ಯಾಚರಣೆಗಳಲ್ಲಿ ಒಟ್ಟು 177 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್​ ಮಹಾನಿರ್ದೇಶಕ ದಿಲ್ಬಾಗ್​ ಸಿಂಗ್​ ಮಾಹಿತಿ ನೀಡಿದ್ದಾರೆ.

ಶ್ರೀನಗರ ಪ್ರದೇಶವೊಂದರಲ್ಲೇ ನಡೆಸಿರುವ 7 ಕಾರ್ಯಾಚರಣೆಗಳಲ್ಲಿ 16 ಉಗ್ರರನ್ನು ಹತ್ಯೆಗೈಯಲಾಗಿದೆ. ಮೃತ ಉಗ್ರರಲ್ಲಿ ಅನೇಕರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ವಿದೇಶಿ ಉಗ್ರರಾಗಿದ್ದಾರೆ ಎಂದು ದಿಲ್ಬಾಗ್​ ಸಿಂಗ್ ತಿಳಿಸಿದ್ದಾರೆ.

ಇಂದು ಶ್ರೀನಗರದಲ್ಲಿ ಬೆಳ್ಳಂಬೆಳಗ್ಗೆ ನಡೆದ ಎನ್​ಕೌಂಟರ್​​ನಲ್ಲಿ ಒಟ್ಟು ಮೂವರು ಉಗ್ರರನ್ನು ಭದ್ರತಾ ಪಡೆಯ ಸೈನಿಕರು ಹೆಡೆಮುರಿ ಕಟ್ಟಿದ್ದಾರೆ. ಶ್ರೀನಗರದ ಬಟಾಮಲೂ ಪ್ರದೇಶದಲ್ಲಿ ಉಗ್ರರು ಅಡಗಿರುವ ನಿಖರ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸಿಆರ್​ಪಿಎಫ್​​ ಯೋಧರು ಕಾರ್ಯಾಚರಣೆ ನಡೆಸಿದ್ದರು. ಎನ್​ಕೌಂಟರ್ ಬಳಿಕ ಮೂವರು ಉಗ್ರರ ಮೃತದೇಹಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.