ETV Bharat / bharat

17 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ! - ಉತ್ತರಪ್ರದೇಶ

ಡ್ರಾಪ್​ ನೀಡುವ ನೆಪದಲ್ಲಿ ಹುಡುಗಿಯೊಬ್ಬಳನ್ನ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

17-year-old gang-raped in UP's Ballia
17-year-old gang-raped in UP's Ballia
author img

By

Published : Aug 6, 2020, 2:48 PM IST

ಲಖನೌ(ಉತ್ತರ ಪ್ರದೇಶ): 17 ವರ್ಷದ ಹುಡುಗಿಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಪ್ರದೇಶದಲ್ಲಿ ನಡೆದಿದ್ದು, ಈಗಾಗಲೇ ಕಾಮುಕರನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರೈಲ್ವೆ ಸ್ಟೇಷನ್​ಗೆ ತಮ್ಮ ಅಜ್ಜಿ ಭೇಟಿ ಮಾಡಲು ತೆರಳಿದ್ದ ವೇಳೆ ನಾಲ್ವರು ದುಷ್ಕರ್ಮಿಗಳು ಡ್ರಾಪ್​ ನೀಡುವುದಾಗಿ ಹೇಳಿ ಆಕೆಯನ್ನ ರಿಕ್ಷಾದಲ್ಲಿ ಹತ್ತಿಸಿಕೊಂಡಿದ್ದಾರೆ. ಇದಾದ ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಬಾಲಕಿ ತದನಂತರ ಸ್ಥಳೀಯರ ಸಹಾಯದಿಂದ ಮನೆಗೆ ಬಂದಿದ್ದಾಳೆ. ಈ ವೇಳೆ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿದ್ದಾರೆ. ಸಿಸಿಸಿಟಿ ದೃಶ್ಯಾವಳಿ ಆಧರಿಸಿ ಈಗಾಗಲೇ ನಾಲ್ವರು ಕಾಮುಕರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾಗಿ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು,ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.