ಪತ್ತನಂತಿಟ್ಟ(ಕೇರಳ): ಕೇರಳದಲ್ಲಿ 16 ವರ್ಷದ ಬಾಲಕನನ್ನು ಆತನ ಸಹಪಾಠಿಗಳೇ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪತ್ತನಂತಿಟ್ಟ ಜಿಲ್ಲೆಯ ಅಂಗಡಿಕಲ್ ಗ್ರಾಮದ ನಿವಾಸಿ ಕೊಲೆಗೀಡಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಆತನ ಇಬ್ಬರು ಸಹಪಾಠಿಗಳು ಶಾಲೆಯ ಬಳಿ ಅವನನ್ನು ಕೊಂದಿದ್ದು, ಶವವನ್ನು ಹೂಳಲು ಪ್ರಯತ್ನಿಸುತ್ತಿದ್ದಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ನಡುವಿನ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಘೋರ ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.