ETV Bharat / bharat

ಕೋವಿಡ್ ಮಧ್ಯೆ ಉಪಟಳ: 15 ಪಾಕ್​ ಯೋಧರು, 8 ಉಗ್ರರ ಸದೆಬಡಿದ ಭಾರತೀಯ ಸೇನೆ

ಮಹಾಮಾರಿ ಕೊರೊನಾ ವಿರುದ್ದ ದೇಶವೇ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಗಡಿಯಲ್ಲಿ ನಿರಂತರವಾಗಿ ಉಪಟಳ ನೀಡ್ತಿದ್ದ ಉಗ್ರರು-ಪಾಕ್​ ಯೋಧರಿಗೆ ಸರಿಯಾದ ಪಾಠ ಕಲಿಸಲಾಗಿದೆ.

author img

By

Published : Apr 12, 2020, 5:09 PM IST

eight terrorist
eight terrorist

ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧ ಹೋರಾಟ ನಡೆಸಿರುವ ಭಾರತ ಲಾಕ್​ಡೌನ್ ಸಂಕಷ್ಟಕ್ಕೊಳಗಾಗಿದ್ದು, ಅದರಿಂದ ಹೊರಬರಲು ಹರಸಾಹಸ ಪಡ್ತಿದೆ. ಇದರ ಮಧ್ಯೆ ಗಡಿಯಲ್ಲಿ ನಿರಂತರವಾಗಿ ತೊಂದರೆ ನೀಡುತ್ತಿರುವ ಪಾಕ್​ ಯೋಧರು ಹಾಗೂ ಉಗ್ರರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.

ಕಳೆದ ಏಪ್ರಿಲ್​ 10ರಂದು ​​ಕೇರನ್​ ಸೆಕ್ಟರ್​​ನಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯ ವೇಳೆ ಪ್ರತಿದಾಳಿ ನಡೆಸಿ 8 ಮಂದಿ ಉಗ್ರರು, 15 ಪಾಕ್ ಯೋಧರು ಹಾಗೂ ಇಬ್ಬರು ಸೆಕ್ಯುರಿಟಿ ಸಿಬ್ಬಂದಿ ಸೆದೆಬಡಿದಿರುವುದಾಗಿ ಮಾಹಿತಿ ಹೊರಬಿದ್ದಿದೆ. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ವ್ಯಾಪ್ತಿಯಲ್ಲಿನ ಕೇರನ್​ ಸೆಕ್ಟರ್​ನಲ್ಲಿ ಗಡಿದಾಟಿ ಒಳನುಗ್ಗಿದ್ದ ಉಗ್ರರು ಹಾಗು ಪಾಕ್‌ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ವೇಳೆ ಐವರು ಭಾರತೀಯ ಯೋಧರು ಕೂಡ ಹುತಾತ್ಮರಾಗಿದ್ದರು.

ಕಿಶನ್​ಗಂಗಾ ನದಿ ಹಾಗೂ ದುಧನಿಯಲ್​​ನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕ್‌​​ಗೆ ಭಾರತೀಯ ಸೇನೆ ಮುಟ್ಟಿನೊಡಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದೆ. ಸಾವನ್ನಪ್ಪಿರುವ ಉಗ್ರರು ಜೈಷ್​-ಇ-ಮೊಹಮ್ಮದ್​ ಸಂಘಟನೆಯವರು ಎಂದು ತಿಳಿದು ಬಂದಿದೆ. ದಾಳಿ ವೇಳೆ ನಾಲ್ವರು ನಾಗರಿಕರು ಹಾಗೂ 15 ವರ್ಷದ ಬಾಲಕಿ ಗಾಯಗೊಂಡಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.