ETV Bharat / bharat

ಒಂದೇ ದಿನ 149 ಹೊಸ ಸೋಂಕಿತರು! ಭಾರತೀಯರೇ ಇನ್ನಾದ್ರೂ ಜಾಗೃತರಾಗಿರಿ - news case of corona in India

ದಿನದಿಂದ ದಿನಕ್ಕೆ ಕೊರೊನಾ ಕಬಂಧಬಾಹು ದೇಶವನ್ನು ವ್ಯಾಪಿಸುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 149 ಹೊಸ ಸೋಂಕಿತರು ಪತ್ತೆಯಾಗಿದ್ದು, ದೇಶದ ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

corona virus
ಕೊರೊನಾ ವೈರಸ್​
author img

By

Published : Mar 28, 2020, 10:44 AM IST

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 149 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 873ಕ್ಕೇರಿದೆ.

ದಿನದಿಂದ ದಿನಕ್ಕೆ ಕೊರೊನಾ ಕಬಂಧಬಾಹು ದೇಶವನ್ನು ವ್ಯಾಪಿಸುತ್ತಿದ್ದು, ನಿನ್ನೆ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಟ್ಟು 873 ಪಾಸಿಟಿವ್​ ಪ್ರಕರಣಗಳಲ್ಲಿ 78 ಜನ ಗುಣಮುಖರಾಗಿದ್ದು, 19 ಜನ ಸಾವನ್ನಪ್ಪಿದ್ದಾರೆ. ಸದ್ಯ 775 ಸೋಂಕಿತರು ಐಸೋಲೇಷನ್​ನಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂದು 6 ಹೊಸ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 159ಕ್ಕೇರಿದೆ. ಇಂದು ಮುಂಬೈನಲ್ಲಿ 5 ಹಾಗೂ ನಾಗ್ಪುರದಲ್ಲಿ ಒಬ್ಬರು ಸೋಂಕಿಗೊಳಗಾಗಿದ್ದಾರೆ.

ರಾಜಸ್ಥಾನದಲ್ಲಿ ಇಂದು ಮತ್ತೆರಡು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 52ಕ್ಕೇರಿದೆ. ಇನ್ನು ಗುಜರಾತ್​ನಲ್ಲೂ 6 ಜನ ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.