ETV Bharat / bharat

ಆನ್‌ಲೈನ್‌ ಕ್ಲಾಸ್‌ಗೆ ಸ್ಮಾರ್ಟ್‌ಫೋನ್‌ ಕೊಡಿಸಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಬಾಲಕ - ಬಾಲಕ ಆತ್ಮಹತ್ಯೆ

ಸ್ಮಾರ್ಟ್​ ಕೊಡಿಸಲಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

commits suicide
commits suicide
author img

By

Published : Aug 1, 2020, 8:20 PM IST

ಕಡಲೂರು (ತಮಿಳುನಾಡು): ಪೋಷಕರು ಸ್ಮಾರ್ಟ್​​​ಫೋನ್​ ಕೊಡಿಸಲಿಲ್ಲವೆಂದು ಬೇಸರಗೊಂಡು 14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸಿರುತೊಂಡಮದೇವಿ ಗ್ರಾಮದ ತನ್ನ ನಿವಾಸದಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಆನ್​ಲೈನ್​​ ಕ್ಲಾಸ್​​ನಲ್ಲಿ ಭಾಗಿಯಾಗುವ ಉದ್ದೇಶದಿಂದ ಸ್ಮಾರ್ಟ್​​​ಫೋನ್​​ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಪೋಷಕರು ಆತನ ಮನವಿ ತಿರಸ್ಕರಿಸಿದ್ದರಿಂದ ಈ ರೀತಿಯ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊರೊನಾ ಕಾರಣದಿಂದ ವಿದ್ಯಾರ್ಥಿಗಳಿಗೆ ಆನ್​ಲೈನ್​ ಮೂಲಕ ತರಗತಿಗಳನ್ನು ಮಾಡಲಾಗುತ್ತಿದೆ.

ಬಾಲಕನ ತಂದೆ ಪ್ರತಿಕ್ರಿಯಿಸಿ, ನನ್ನ ಬಳಿ ಹಣವಿಲ್ಲದ ಕಾರಣ ಮುಂದಿನ ದಿನಗಳಲ್ಲಿ ಮೊಬೈಲ್​ ಕೊಡಿಸುವುದಾಗಿ ಹೇಳಿದ್ದೆ. ಆದ್ರೆ ಆತ ಕೇಳಲ್ಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.