ರಾಯ್ಪುರ(ಛತ್ತೀಸ್ಗಢ): ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ 7 ಯೋಧರು ಹುತಾತ್ಮರಾಗಿದ್ದು, 14 ಸೈನಿಕರು ಗಾಯಗೊಂಡು, ಉಳದಿಂತೆ 17 ಯೋಧರು ಕಣ್ಮರೆಯಾಗಿರುವ ಘಟನೆ ಛತ್ತೀಸ್ಗಢದ ರಾಯ್ಪುರ್ದ ನಕ್ಸಲ್ ಪೀಡಿತ ಪ್ರದೇಶ ಸುಕ್ಮಾದಲ್ಲಿ ನಡೆದಿದೆ.
ನಕ್ಸಲ ಪೀಡಿತ ಸುಕ್ಮಾ ಅರಣ್ಯ ಪ್ರದೇಶದಲ್ಲಿ ನಕ್ಸಲರ ಜತೆ ನಡೆದ ಗುಂಡಿನ ಕಾಳಗದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 2:30ಕ್ಕೆ ಚಿಂಟಗುಫಾ ಪ್ರದೇಶದ ಕೋರಜ್ಗುಡಾ ಅರಣ್ಯ ಪ್ರದೇಶದಲ್ಲಿ ಯೋಧರು-ನಕ್ಸಲರ ನಡುವೆ ಗುಂಡಿನ ದಾಳಿ ನಡೆದಿದೆ. ನಕ್ಸಲರ ವಿರುದ್ಧ ಯೋಧರು ಜಂಟಿ ಕಾರ್ಯಚರಣೆ ನಡೆಸಿದ್ದರು. ಇದರಲ್ಲಿ ಪೊಲೀಸ್ ಜಿಲ್ಲಾ ರಿಸರ್ವ್ ಗಾರ್ಡ್ ಹಾಗೂ ವಿಶೇಷ ಕಾರ್ಯಪಡೆ ಮತ್ತು ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್) ಸಿಬ್ಬಂದಿ ಭಾಗಿಯಾಗಿದ್ದರು.
ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಕೆಲ ನಕ್ಸಲರು ಹಾಗೂ ಅವರ ಗುಂಪಿನ ಮುಖಂಡರು ಇದರಲ್ಲಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಯೋಧರನ್ನ ರಾಯ್ಪುರ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಅರಣ್ಯ ಪ್ರದೇಶದಲ್ಲಿ 150ಕ್ಕೂ ಯೋಧರು ಇದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.