ಮುಜಫರ್ ನಗರ್(ಬಿಹಾರ್) : ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ಮಿದುಳು ಸಂಬಂಧಿ ರೋಗಕ್ಕೆ 14 ಮಕ್ಕಳು ಸಾವನ್ನಪ್ಪಿದ ಘಟನೆ ಬಿಹಾರದ ಮುಜಫರ್ ನಗರದಲ್ಲಿ ಸಂಭವಿಸಿದೆ.
ಇಲ್ಲಿನ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಎಸ್ಕೆಎಂಸಿಎಚ್) ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಸಂಬಂಧಿತ ರೋಗದಿಂದ ಬಳಲುತ್ತಿದ್ದ 38 ರೋಗಿಗಳು ದಾಖಲಾಗಿದ್ದರು. ಇದರಲ್ಲಿ 14 ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
-
Bihar: 14 children have died in Muzaffarpur reportedly due to Acute Encephalitis Syndrome (AES). Sunil Shahi, Superintendent SKMCH, Muzaffarpur, says, “Total 38 patients were admitted, of which there are 14 casualties. Some of the admitted patients still have high fever.” pic.twitter.com/AGtVsWo2Rk
— ANI (@ANI) June 8, 2019 " class="align-text-top noRightClick twitterSection" data="
">Bihar: 14 children have died in Muzaffarpur reportedly due to Acute Encephalitis Syndrome (AES). Sunil Shahi, Superintendent SKMCH, Muzaffarpur, says, “Total 38 patients were admitted, of which there are 14 casualties. Some of the admitted patients still have high fever.” pic.twitter.com/AGtVsWo2Rk
— ANI (@ANI) June 8, 2019Bihar: 14 children have died in Muzaffarpur reportedly due to Acute Encephalitis Syndrome (AES). Sunil Shahi, Superintendent SKMCH, Muzaffarpur, says, “Total 38 patients were admitted, of which there are 14 casualties. Some of the admitted patients still have high fever.” pic.twitter.com/AGtVsWo2Rk
— ANI (@ANI) June 8, 2019
ಎಸ್ಕೆಎಂಸಿಎಚ್ ಅಧೀಕ್ಷಕ ಮಾತನಾಡಿ, ಮಿದುಳು ಸಂಬಂಧಿ ರೋಗ ಉಲ್ಬಣಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ 38 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.ರೋಗ ತೀವ್ರತೆ ಹೆಚ್ಚಾಗಿ 14 ಮಕ್ಕಳು ಮೃತಪಟ್ಟಿದ್ದಾರೆ. ಕೆಲವು ರೋಗಿಗಳಲ್ಲಿ ಜ್ವರದ ತೀವ್ರತೆ ಅಧಿಕವಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
2012ರ ಜೂನ್ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ.