ನವದೆಹಲಿ : ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ನಂತರ ವಿವಿಧ ಜೈಲುಗಳಲ್ಲಿ ಇರುವ ರೈತರ ಪಟ್ಟಿಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತರಿಸಿಕೊಂಡರು.
ಇದನ್ನೂ ಓದಿ...ಸಿಂಘು ಗಡಿಯಲ್ಲಿ ಪ್ರತಿಭಟನೆ: ಪಂಜಾಬ್ನ ಮತ್ತೋರ್ವ ರೈತ ಸಾವು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನನ್ನನ್ನು ಸಂಪರ್ಕಿಸಿದ ರೈತ ಮುಖಂಡರ ಗುಂಪು 100ಕ್ಕೂ ಅಧಿಕ ರೈತರು ಕಾಣೆಯಾಗಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿತು. ಅವರು ಎಲ್ಲಿದ್ದಾರೋ ನಮಗೆ ಸಿಗುತ್ತಿಲ್ಲ. ಹೀಗಾಗಿ, ಕಾಣೆಯಾದ ರೈತರ ಪತ್ತೆ ಹಚ್ಚಲು ನಿಮ್ಮ (ಸರ್ಕಾರ) ಸಹಾಯ ಬೇಕಾಗಿದೆ ಎಂದು ಕೋರಿದೆ ಎಂದು ಹೇಳಿದರು.
ನಾಪತ್ತೆಯಾದ 115 ರೈತರ ಹೆಸರನ್ನು ಒಳಗೊಂಡಿರುವ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರು, ಅಗತ್ಯಬಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಆ ರೈತರನ್ನು ತಮ್ಮ ಕುಟುಂಬಗಳಿಗೆ ಹಸ್ತಾಂತರಿಸುವುದಾಗಿ ದೆಹಲಿ ಸಿಎಂ ಭರವಸೆ ನೀಡಿದರು.