ETV Bharat / bharat

16 ವರ್ಷದ ಬಾಲಕಿ ಖಾತೆಗೆ 10 ಕೋಟಿ ರೂ. ಜಮೆ!! - 10 ಕೋಟಿ ರೂ. ಹಣ ಜಮಾವಣೆ

ಅಲಹಾಬಾದ್​​ ಬ್ಯಾಂಕ್​ ಖಾತೆ ಹೊಂದಿರುವ ಸರೋಜ್​​ ಕುಟುಂಬದೊಂದಿಗೆ ತೆರಳಿ ಈಗಾಗಲೇ ಬ್ಯಾಂಕ್​ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

16 year old girl account in ballia
16 year old girl account in ballia
author img

By

Published : Sep 22, 2020, 6:43 PM IST

Updated : Sep 22, 2020, 6:51 PM IST

ಲಖನೌ(ಉತ್ತರ ಪ್ರದೇಶ): 16 ವರ್ಷದ ಬಾಲಕಿಯೊಬ್ಬಳ ಬ್ಯಾಂಕ್​ ಖಾತೆಗೆ ಬರೋಬ್ಬರಿ 10 ಕೋಟಿ ರೂ. ಹಣ ಜಮಾ ಆಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬೀಂಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಲಹಾಬಾದ್​​ ಬ್ಯಾಂಕ್​ ಖಾತೆ ಹೊಂದಿರುವ ಸರೋಜ್​​ ಕುಟುಂಬದೊಂದಿಗೆ ತೆರಳಿ ಈಗಾಗಲೇ ಬ್ಯಾಂಕ್​ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬ್ಯಾಂಕ್​​ನ ಅಧಿಕಾರಿಗಳು ಹಣ ವಿತ್​ಡ್ರಾ ಮಾಡದಂತೆ ನಿರ್ಬಂಧ ಹಾಕಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

2020ರ ಫೆಬ್ರವರಿ ತಿಂಗಳಲ್ಲಿ ಅಲಹಾಬಾದ್​​ ಬ್ಯಾಂಕ್​​ನ ಶಾಖೆಯಲ್ಲಿ ಆನ್​ಲೈನ್​ ವಂಚನೆ ನಡೆಯುತ್ತಿದೆ ಎಂಬ ಗುಸುಗುಸು ಕೇಳಿ ಬಂದಿತ್ತು. ಇನ್ನು ಹಣ ವರ್ಗಾವಣೆಗೊಂಡಿರುವ ಬಾಲಕಿಯನ್ನ ಬ್ಯಾಂಕ್​ಗೆ ಕರೆಯಿಸಿ ವಿಚಾರಣೆಗೊಳಪಡಿಸಿದಾಗ ತನಗೆ ಪಂಜಾಬ್​​ನಿಂದ ಕರೆ ಬಂದಿದ್ದು, ಖಾತೆ ಮತ್ತು ಎಟಿಎಂ ಕಾರ್ಡ್​ಗಳ ವಿವರ ಕೇಳಿದ್ದರು ಎಂದಿದ್ದಾಳೆ. ಇದರ ಆಧಾರದ ಮೇಲೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Sep 22, 2020, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.