ಚೆನ್ನೈ(ತಮಿಳುನಾಡು): ತಿರುಚ್ಚಿಯ ವಾಯು ಗುಪ್ತಚರ ಘಟಕವು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ 8 ಮಂದಿ ಪ್ರಯಾಣಿಕರಿಂದ 63.47 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ.
ದುಬೈನಿಂದ ಬಂದ ವಿಮಾನದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸುವಾಗ, ವ್ಯಕ್ತಿಯೊಬ್ಬ ಏನನ್ನೋ ಮರೆಮಾಚುತ್ತಿರುವುದು ಕಂಡು ಬಂದಿದೆ. ತಕ್ಷಣ ಆತನನ್ನು ಪರಿಶೀಲಿಸಿದಾಗ ಅಕ್ರಮ ಚಿನ್ನ ಹೊಂದಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವಿಮಾನದಲ್ಲಿ ಬಂದ ಎಂಟು ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಬಳಿಕ ನಡೆದ ಪ್ರಾಥಮಿಕ ತನಿಖೆಯಲ್ಲಿ ಅವರು ಚೆನ್ನೈ ಮೂಲದವರಾಗಿದ್ದು, ಅನುಮಾನದ ಆಧಾರದ ಮೇಲೆ ವೈಯಕ್ತಿಕ ಹುಡುಕಾಟದಲ್ಲಿ ಪ್ರಯಾಣಿಕರ ಬಳಿ ಇದ್ದ ಚಿನ್ನವನ್ನು ಅವರ ದೇಹದಿಂದ ಹಾಗೂ ಟ್ರಾಲಿ ಮಾದರಿಯ ಸೂಟ್‌ಕೇಸ್ ಹ್ಯಾಂಡಲ್‌ಗಳಿಂದ ಪತ್ತೆ ಮಾಡಲಾಗಿದೆ. ಕಸ್ಟಮ್ಸ್ ಕಾಯ್ದೆಯಡಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ರಜಿನಿ ಹೊಸ ಪಕ್ಷದ ಹೆಸರು, ಚಿಹ್ನೆ ಬಹಿರಂಗ!?
ಇನ್ನು ವಶಪಡಿಸಿಕೊಂಡ ಚಿನ್ನದ ಒಟ್ಟು ತೂಕ 1.26 ಕೆ.ಜಿ ಆಗಿದ್ದು ಸುಮಾರು 63.47 ಲಕ್ಷಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ. ಈ ಪ್ರಕರಣದಲ್ಲಿ ಇಟ್ಟು ಎಂಟು ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.