ಹೈದರಾಬಾದ್ : ಭಾರತ್ ಬಯೋಟೆಕ್ ತನ್ನ ಕೋವಿಡ್-19 ಇಂಟ್ರಾನಾಸಲ್ ಲಸಿಕೆಯನ್ನು ವಾರ್ಷಿಕವಾಗಿ ಒಂದು ಶತಕೋಟಿ ಡೋಸ್‌ಗಳನ್ನು ತಯಾರಿಸುವ ಗುರಿ ಹೊಂದಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಭಾರತದ ಮೊದಲ ಸ್ಥಳೀಯ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಇನ್ಮುಂದೆ ನಾಸಲ್ ರೂಪದಲ್ಲಿ ಲಭ್ಯವಾಗಲಿದ್ದು, ಮೂಗಿನ ಮೂಲಕ ಬಳಸಬಹುದಾಗಿದೆ.
ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ಅನುಮೋದನೆ ನೀಡುವಂತೆ ಹೈದರಾಬಾದ್ ಮೂಲದ ಈ ಲಸಿಕೆ ತಯಾರಿಕೆ ಸಂಸ್ಥೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ಡಿಸಿಜಿಐಯನ್ನು ಈಗಾಗಲೇ ಸಂಪರ್ಕಿಸಿದೆ.
ಇಂಟ್ರಾನಾಸಲ್ ಲಸಿಕೆ (BBV154) ಸೋಂಕು ಪ್ರಸರಣವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಇದರ 3ನೇ ಹಂತದ ಪ್ರಯೋಗಗಳು 2022ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ನಾಸಲ್ ಲಸಿಕೆ ಆಕ್ರಮಣಶೀಲವಲ್ಲದ, ಸೂಜಿ ಮುಕ್ತ, ಸುಲಭವಾದ ಲಸಿಕೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ಸೂಕ್ತವಾಗಿದೆ. ಇದು ಅಳೆಯಲು ಸುಲಭವಾಗಿದೆ ಎಂದು ಭಾರತ್ ಬಯೋಟೆಕ್‌ನ ಮೂಲಗಳು ತಿಳಿಸಿವೆ.
ಮೂಗಿನ ಲಸಿಕೆಯನ್ನು ಕೋವಿಡ್‌ನ ರೂಪಾಂತರಿಗಳ ವಿರುದ್ಧ ಬೂಸ್ಟರ್ ಡೋಸ್ ಆಗಿ ಬಳಸಬಹುದು. ಯಾವುದೇ ಇಂಟ್ರಾಮಸ್ಕುಲರ್ ಕೋವಿಡ್ ಲಸಿಕೆಯ ಎರಡು ಡೋಸ್‌ಗಳ ಸಂಯೋಜನೆಯಲ್ಲಿ ಇದನ್ನು ಬೂಸ್ಟರ್ ಡೋಸ್ ಆಗಿ ನೀಡಬಹುದು ಎಂದು ಹೇಳಿದೆ.
ನಮ್ಮ ಲಸಿಕೆಯನ್ನು 2-18 ವರ್ಷ ವಯಸ್ಸಿನ ಮಕ್ಕಳಿಗೆ ನೀಡುವ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಇದು ಈಗ ಡಿಸಿಜಿಐನಿಂದ 12-18 ವರ್ಷ ವಯಸ್ಸಿನವರಿಗೆ ಅನುಮೋದನೆ ಪಡೆದಿದೆ. ಮುಂದಿನ ವರ್ಷದ ಜನವರಿ 3 ರಿಂದಲೇ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ನೀಡುತ್ತದೆ. ಹೀಗಾಗಿ, ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ತಿಳಿಸಿದೆ.
ಡೋಸೇಜ್ ಅನ್ನು ವಯಸ್ಕರು ಮತ್ತು ಮಕ್ಕಳಿಗೆ ಸಮಾನವಾಗಿ ನೀಡಬಹುದು. ಮೂಲ ರೂಪಾಂತರ ಹಾಗೂ ನಂತರದ ರೂಪಾಂತರಗಳಿಗಾಗಿ ವಯಸ್ಕರಲ್ಲಿ ಸ್ಥಾಪಿತವಾದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ದಾಖಲೆಯೊಂದಿಗೆ ಕೋವ್ಯಾಕ್ಸಿನ್ ಮಕ್ಕಳಿಗೆ ತುಂಬಾ ಸೂಕ್ತವಾಗಿದೆ ಎಂತಲೂ ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಕೊವೊವಾಕ್ಸ್, ಕಾರ್ಬೋವ್ಯಾಕ್ಸ್, ಮೊಲ್ನುಪಿರವಿರ್ ಮಾತ್ರೆ ತುರ್ತು ಬಳಕೆಗೆ ಅನುಮತಿ