ETV Bharat / bharat

ಪಂಜಾಬ್ ಅಧಿಕಾರಿಗಳೊಂದಿಗೆ ಕೇಜ್ರಿವಾಲ್​ ಸಭೆ: ಸಿಎಂ ಭಗವಂತ್ ಮಾನ್ ಸಮರ್ಥನೆ ಹೀಗಿದೆ..

ಪಂಜಾಬ್ ರಾಜ್ಯದ ಅಧಿಕಾರಿಗಳೊಂದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಭಗವಂತ್ ಮಾನ್ ಪ್ರತಿಕ್ರಿಯೆ ನೀಡಿದ್ದಾರೆ.

Bhagwant Mann reaction
Bhagwant Mann reaction
author img

By

Published : Apr 14, 2022, 3:11 PM IST

ಚಂಡೀಗಢ(ಪಂಜಾಬ್​): ಕಳೆದೆರಡು ದಿನಗಳ ಹಿಂದೆ ಪಂಜಾಬ್​ ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸಭೆ ನಡೆಸಿದ್ದು, ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ವಿಷಯದ ಬಗ್ಗ ಇದೀಗ ಪಂಜಾಬ್​ ಸಿಎಂ ಭಗವಂತ್ ಮಾನ್ ಮಾತನಾಡಿದ್ದಾರೆ.

ನಾನೇ ಖುದ್ದಾಗಿ ಅರವಿಂದ್ ಕೇಜ್ರಿವಾಲ್ ಬಳಿ ನಮ್ಮ ಅಧಿಕಾರಿಗಳನ್ನು ಕಳುಹಿಸಿದ್ದೆ ಎಂದು ಹೇಳಿರುವ ಮಾನ್, ಅಗತ್ಯಬಿದ್ದರೆ ತರಬೇತಿಗಾಗಿ ಅಧಿಕಾರಿಗಳನ್ನು ಗುಜರಾತ್​, ಆಂಧ್ರಪ್ರದೇಶ, ತಮಿಳುನಾಡು ಮತ್ತು ಇಸ್ರೇಲ್​​ಗೂ ಕಳುಹಿಸುತ್ತೇನೆ. ಇದಕ್ಕೆ ಇತರರು ಆಕ್ಷೇಪ ಮಾಡುವ ಅಗತ್ಯವಿಲ್ಲ ಎಂದರು. ಅರವಿಂದ್ ಕೇಜ್ರಿವಾಲ್ ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ವಿಷಯಗಳಲ್ಲಿ ಪರಿಣಿತರಾಗಿದ್ದಾರೆ. ಹಾಗಾಗಿ, ಅವರ ಬಳಿ ತರಬೇತಿಗೆ ಏಕೆ ಕಳುಹಿಸಬಾರದು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಾಜಿ ಶಾಸಕನ ಮಗಳು ನೇಣಿಗೆ ಶರಣು.. ಎಂಬಿಬಿಎಸ್ ವಿದ್ಯಾರ್ಥಿನಿಯ ಸಾವಿನ ಕಾರಣ ನಿಗೂಢ!

ವಿವಾದವೇನು? ಕಳೆದೆರಡು ದಿನಗಳ ಹಿಂದೆ ಪಂಜಾಬ್​​ನ ವಿದ್ಯುತ್​ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸಭೆ ನಡೆಸಿದ್ದರು. ಇದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​​ ಗೈರು ಹಾಜರಾಗಿರುವುದು ಚರ್ಚೆಗೆ ಕಾರಣವಾಗಿತ್ತು. ಎಎಪಿ ಮುಖ್ಯಸ್ಥರ ನಡೆಯ ವಿರುದ್ಧ ಪಂಜಾಬ್​, ದೆಹಲಿ ಕಾಂಗ್ರೆಸ್​​ ಸೇರಿದಂತೆ ವಿವಿಧೆಡೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಪಂಜಾಬ್​​ ಸರ್ಕಾರ ಎಎಪಿ ಪಕ್ಷದ ಮುಖ್ಯಸ್ಥರ ರಿಮೋಟ್ ಕಂಟ್ರೋಲ್​​ ಆಗಿದೆ ಎಂದು ವಾಗ್ದಾಳಿ ನಡೆಸಲಾಗಿತ್ತು.

ಇದನ್ನೂ ಓದಿ: ಪಂಜಾಬ್​ ಅಧಿಕಾರಿಗಳೊಂದಿಗೆ ದೆಹಲಿ ಸಿಎಂ ಸಭೆ; ವಿವಾದಕ್ಕೆ ಕಾರಣವಾದ ಕೇಜ್ರಿವಾಲ್​ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.