ಬೆಂಗಳೂರು: ಎರಡು ತಿಂಗಳ ಹಿಂದೆ ನಾಪತ್ತೆಯಾಗಿರುವ ಬಾಲಕಿಯ ಪ್ರಕರಣವೊಂದು ಇದೀಗ ಹೆಚ್ಚು ಗಮನ ಸೆಳೆದಿದ್ದು, ಕಳೆದ ಅಕ್ಟೋಬರ್ 31ರಿಂದ ಕಾಣೆಯಾಗಿರುವ ಬಾಲಕಿ ಅಧ್ಯಾತ್ಮಿಕ ಪ್ರಭಾವಕ್ಕೊಳಗಾಗಿ ಮನೆಯಿಂದ ಹೊರಟು ಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬಾಲಕಿ ಹುಡುಕಿಕೊಡುವಂತೆ ಅಸಹಾಯಕ ಕುಟುಂಬ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ 17 ವರ್ಷದ ಅನುಷ್ಕಾ ಎರಡು ಜೊತೆ ಬಟ್ಟೆ, 2,500 ರೂಪಾಯಿಯೊಂದಿಗೆ ಬೆಂಗಳೂರಿನಲ್ಲಿರುವ ತನ್ನ ಮನೆ ಬಿಟ್ಟು ಹೊರಟು ಹೋಗಿದ್ದು, ಎರಡು ತಿಂಗಳಾದರೂ ಆಕೆಯ ಬಗ್ಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಮೈಕ್ರೋ ಬ್ಲಾಗಿಗ್ ಮೂಲಕ ತಮ್ಮ ಮಗಳನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿಂದಲೂ ಅನುಷ್ಕಾ ನಡವಳಿಕೆಯಲ್ಲಿ ಅನೇಕ ರೀತಿಯ ಬದಲಾವಣೆಗಳು ಕಂಡು ಬಂದಿದ್ದವು. ಹೆಚ್ಚಾಗಿ ಏಕಾಂಗಿಯಾಗಿರಲು ಇಚ್ಚಿಸುತ್ತಿದ್ದಳು ಎಂದು ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಆಪ್ತ ಸಮಾಲೋಚಕರ ಬಳಿ ಕರೆದುಕೊಂಡು ಹೋದ ನಂತರ ನಮ್ಮೊಂದಿಗೆ ಮಾತನಾಡುವುದನ್ನ ಸಂಪೂರ್ಣವಾಗಿ ನಿಲ್ಲಿಸಿದ್ದಳು ಎಂದು ಬಾಲಕಿ ತಂದೆ ಅಭಿಷೇಕ್ ತಿಳಿಸಿದ್ದಾರೆ.
-
Karnataka: Family members of a minor girl, missing for the last 2 months from Bengaluru, suspect a 'shamanism' connection to her disappearance
— ANI (@ANI) December 30, 2021 " class="align-text-top noRightClick twitterSection" data="
"She told us that she wanted to do shamanism type of meditation. We told her to learn it at home only," says her mother Archana (1/2) pic.twitter.com/3su6RpuGDP
">Karnataka: Family members of a minor girl, missing for the last 2 months from Bengaluru, suspect a 'shamanism' connection to her disappearance
— ANI (@ANI) December 30, 2021
"She told us that she wanted to do shamanism type of meditation. We told her to learn it at home only," says her mother Archana (1/2) pic.twitter.com/3su6RpuGDPKarnataka: Family members of a minor girl, missing for the last 2 months from Bengaluru, suspect a 'shamanism' connection to her disappearance
— ANI (@ANI) December 30, 2021
"She told us that she wanted to do shamanism type of meditation. We told her to learn it at home only," says her mother Archana (1/2) pic.twitter.com/3su6RpuGDP
ಇದನ್ನೂ ಓದಿರಿ: ಟೈಯರ್ಗೆ ಪಂಕ್ಚರ್ ಹಾಕುವಾಗ ಸ್ಫೋಟ.. ಕ್ಷಣಾರ್ಧದಲ್ಲಿ ಹಾರಿಹೋಯ್ತು ಪ್ರಾಣ ಪಕ್ಷಿ!
ಆತ್ಮಗಳೊಂದಿಗೆ ಸಂಪರ್ಕ ಸಾಧಿಸುವ ಸಂಪ್ರದಾಯ ಶಾಮನಿಸಂ(shamanism) ಬಗ್ಗೆ ಆನ್ಲೈನ್ನಲ್ಲಿ ಓದುತ್ತಿದ್ದ ಅನುಷ್ಕಾ ಅದರಿಂದ ತುಂಬಾ ಪ್ರಭಾವಿತಳಾಗಿದ್ದಳು ಎಂದು ತಿಳಿದು ಬಂದಿದ್ದು, ಅವಳ ಮೇಲೆ ಯಾರೋ ಪ್ರಭಾವ ಬೀರಿದ್ದಾರೆ. ಶಾಮನಿಸಂ ಕಲಿಯಬೇಕು ಎಂದು ನನ್ನ ಬಳಿ ಹೇಳಿಕೊಂಡಿದ್ದಳು ಎಂದು ತಂದೆ ಮಾಹಿತಿ ನೀಡಿದ್ದಾರೆ.
12ನೇ ತರಗತಿಯಲ್ಲಿ ಪಾಸ್ ಆಗಿದ್ದ ಅನುಷ್ಕಾ ಅಧ್ಯಾತ್ಮಿಕ ಜೀವನದ ಬಗ್ಗೆ ಸಹಾರಾ ರೋಸ್, ಕಾಮ್ಯಾ ಬುಚ್ ಅವರಿಂದ ಪ್ರಭಾವಿತರಾಗಿದ್ದಳು ಎಂದು ತಿಳಿದು ಬಂದಿದೆ.ಬಾಲಕಿ ಮನೆ ಬಿಟ್ಟು ಹೊರ ಹೋಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬೆಂಗಳೂರು ಉತ್ತರ ವಲಯದ ಉಪ ಪೊಲೀಸ್ ಕಮಿಷನರ್ ವಿನಾಯಕ್ ಪಾಟೀಲ್, ನಾವು ಈಗಾಗಲೇ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆಯ ಚಲನವಲನ ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.