ETV Bharat / bharat

ಪಶ್ಚಿಮ ಬಂಗಾಳ ವಿಶ್ವದಲ್ಲೇ ಅತ್ಯುತ್ತಮ ರಾಜ್ಯವಾಗಲಿದೆ: ಮಮತಾ ಬ್ಯಾನರ್ಜಿ ವಿಶ್ವಾಸ - Etv bharat kannada

ಪಶ್ಚಿಮ ಬಂಗಾಳವು ಸಾಂಸ್ಕೃತಿಕ ಪ್ರವಾಸೋದ್ಯಮದ ಕೇಂದ್ರವಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯವು ವಿಶ್ವದ ಅತ್ಯುತ್ತಮ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದರು.

Mamata Banerjee
ಮಮತಾ ಬ್ಯಾನರ್ಜಿ
author img

By

Published : Sep 12, 2022, 5:26 PM IST

ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ಮನ್ನಣೆಗಳು ದೊರೆತಿವೆ. ಮುಂದಿನ ದಿನಗಳಲ್ಲಿ ರಾಜ್ಯವು ವಿಶ್ವದ ಅತ್ಯುತ್ತಮ ರಾಜ್ಯವಾಗಲಿದೆ. ವಿಶ್ವಸಂಸ್ಥೆ ಕನ್ಯಾಶ್ರೀ ಪ್ರಶಸ್ತಿ ನೀಡುತ್ತಿದೆ. ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆ ಪ್ರಪಂಚದಲ್ಲೇ ಅತ್ಯುತ್ತಮವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನೇತಾಜಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಉತ್ಕರ್ಷ್ ಬಂಗಾಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಗಾಳವು ಮತ್ತೊಮ್ಮೆ ಸಾಂಸ್ಕೃತಿಕ ಪ್ರವಾಸೋದ್ಯಮದ ತಾಣವಾಗಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. 'ಬೆಸ್ಟ್ ಡೆಸ್ಟಿನೇಶನ್ ಫಾರ್ ಕಲ್ಚರ್ ಅವಾರ್ಡ್' -2023ಅನ್ನು ಬರ್ಲಿನ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಅಮಿತ್​ ಶಾ ನಿಷ್ಪ್ರಯೋಜಕ, 2024ರಲ್ಲಿ ಖೇಲಾ ಹೋಬೆ: ಮಮತಾ ಬ್ಯಾನರ್ಜಿ

ಈ ಪ್ರಶಸ್ತಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜರ್ಮನಿಗೆ ಭೇಟಿ ನೀಡಲಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯವಾಗಿರುವುದರಿಂದ ನಾನೇ ಆ ಪ್ರಶಸ್ತಿಯನ್ನು ತೆಗೆದುಕೊಳ್ಳಲು ಹೋಗುತ್ತೇನೆ. ಇಲ್ಲಿನ ದುರ್ಗಾ ಪೂಜೆಗಾಗಿ ವಿಶ್ವಸಂಸ್ಥೆಯಿಂದ ಕನ್ಯಾಶ್ರೀ ಪ್ರಶಸ್ತಿ ನೀಡಲಾಗಿದೆ.

ಕೇಂದ್ರದ ವಿರುದ್ಧ ಕಿಡಿ.. ಈ ನಡುವೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರವು ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ದೇಶವನ್ನು ಎಜೆನ್ಸಿ ರಾಜ್ಯವನ್ನಾಗಿ ಮಾಡುತ್ತಿದೆಯೇ ಹೊರತಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ದೀದಿ ಆರೋಪಿಸಿದರು.

ತಮ್ಮ ಆಡಳಿತದ ಈ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 40 ಪರ್ಸೆಂಟ್​ ಬಡತನವನ್ನು ಕಡಿಮೆ ಮಾಡಿರುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.