ರಾಯ್ಗಂಜ್(ಪಶ್ಚಿಮ ಬಂಗಾಳ): ಅತಿಥಿಗಳಿಗೆ ಸಿಹಿ ತಿನಿಸುಗಳನ್ನು ನೀಡುವುದು ಪಶ್ಚಿಮ ಬಂಗಾಳದಲ್ಲಿ ಸಂಪ್ರದಾಯವಾಗಿದೆ. ಈಗ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಈ ಸಿಹಿ ತಿನಿಸುಗಳು ವಿಭಿನ್ನವಾಗಿ ಜನರಿಗೆ ರುಚಿ ನೀಡುತ್ತಿವೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಪಕ್ಷದ ಚಿಹ್ನೆಗಳೊಂದಿಗೆ ತಯಾರಾಗುತ್ತಿವೆ ಸಿಹಿತಿಂಡಿಗಳು
ಉತ್ತರ ದಿನಾಜ್‌ಪುರ ಜಿಲ್ಲೆಯ ರಾಯಗಂಜ್‌ನಲ್ಲಿರುವ ಒಂದು ಸಣ್ಣ ಸಿಹಿ ಅಂಗಡಿಯಲ್ಲಿ ಈ ರಾಜಕೀಯ ಪಕ್ಷಗಳ ಘೊಷಣೆಗಳನ್ನು ಸಿಹಿ ತಿಂಡಿಗಳ ಮೇಲೆ ಬರೆಯಲಾಗಿದೆ. ತೃಣಮೂಲ ಕಾಂಗ್ರೆಸ್ಸಿನ 'ಖೇಲಾ ಹೋಬ್'ನಿಂದ ಹಿಡಿದು ಸಿಪಿಐ(ಎಂ)ನ 'ತುಂಪಾ ಸೋನಾ' ಮತ್ತು ಬಿಜೆಪಿಯ 'ಸೋನಾರ್ ಬಾಂಗ್ಲಾ' ಘೊಷಣೆ ಸೇರದಂತೆ ಎಲ್ಲಾ ಪಕ್ಷಗಳ ರಾಜಕೀಯ ಘೋಷಣೆಗಳನ್ನು ತಿಂಡಿ ಮೇಲೆ ಬರೆಯಲಾಗಿದೆ.
ಹಾಗೆಯೇ ಈ ಸಿಹಿತಿಂಡಿಗಳು ಕೆಂಪು, ಹಸಿರು ಮತ್ತು ಕೇಸರಿ ಬಣ್ಣದಲ್ಲಿ ಲಭ್ಯವಾಗುತ್ತಿದೆ. ಜನರಿಗೆ ಇನ್ನಷ್ಟು ರುಚಿಕರ ಎನಿಸಿವೆ. ಸಿಹಿ ತಿಂಡಿಗಳು ಜನಪ್ರಿಯವಾಗಿವೆ. ಬೇಡಿಕೆ ಹೆಚ್ಚುತ್ತಿದೆ ಎಂದು ಅಂಗಡಿಯ ಮಾಲೀಕರು ಹೇಳುತ್ತಿದ್ದಾರೆ.
ಹೆಚ್ಚಿನ ಓದಿಗೆ: ಗರಿಗರಿ ದೋಸೆಯಲ್ಲಿ ಪಕ್ಷದ ಚಿಹ್ನೆಗಳು: ರಾಜಕಾರಣಿಗಳ ಮುಖಗಳೇ ಇಲ್ಲಿ ಸ್ವಾದಿಷ್ಟ ಟಿಫಿನ್!
ಅಂಗಡಿ ಮಾಲೀಕ ಅರಿಜಿತ್ ಚೌಧರಿ ಅವರ ಪ್ರಕಾರ, ಚುನಾವಣೆಯು ಪ್ರಜಾಪ್ರಭುತ್ವದ ಶ್ರೇಷ್ಠ ಹಬ್ಬವಾಗಿದೆ. ಈ ಹಿಂದೆ ನಾವು ಪಕ್ಷದ ಲಾಂಛನಗಳನ್ನು ಸಿಹಿತಿಂಡಿಗಳ ಮೇಲೆ ಬರೆಯುತ್ತಿದೆವು. ಈಗ ಪಕ್ಷಗಳ ಘೋಷಣೆಗಳನ್ನು ಸಿಹಿ ತಿನಿಸುಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.