ಕೋಲ್ಕತ್ತಾ: ಮಹಾಮಾರಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಕೆಲವೊಂದು ರಾಜ್ಯಗಳು ಬೇರೆ ರಾಜ್ಯಗಳಿಂದ ಬರುವ ಜನರ ಮೇಲೆ ನಿರ್ಬಂಧ ವಿಧಿಸುತ್ತಿದ್ದು, ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಅಂತಹದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಮಾನಯಾನದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳುವ ನಾಲ್ಕು ರಾಜ್ಯದ ಜನರಿಗೆ ಇದೀಗ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ಛತ್ತೀಸಗಢ ರಾಜ್ಯದ ಜನರಿಗೆ ಆರ್ಟಿ-ಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಮಾಯಾನ ಇಲಾಖೆಗೆ ಈಗಾಗಲೇ ಮಾಹಿತಿ ಸಹ ನೀಡಿದೆ.
-
Air passengers travelling from Delhi, Uttar Pradesh, Madhya Pradesh, Gujarat and Chhattisgarh to #WestBengal from April 26 onwards, will have to present negative COVID reports, no older than 72 hours: West Bengal government informs Ministry of Civil Aviation (MoCA)
— ANI (@ANI) April 23, 2021 " class="align-text-top noRightClick twitterSection" data="
">Air passengers travelling from Delhi, Uttar Pradesh, Madhya Pradesh, Gujarat and Chhattisgarh to #WestBengal from April 26 onwards, will have to present negative COVID reports, no older than 72 hours: West Bengal government informs Ministry of Civil Aviation (MoCA)
— ANI (@ANI) April 23, 2021Air passengers travelling from Delhi, Uttar Pradesh, Madhya Pradesh, Gujarat and Chhattisgarh to #WestBengal from April 26 onwards, will have to present negative COVID reports, no older than 72 hours: West Bengal government informs Ministry of Civil Aviation (MoCA)
— ANI (@ANI) April 23, 2021
ವರದಿ 72 ಗಂಟೆಯೊಳಗೆ ಮಾಡಿಸಿದ್ದಾಗಿರಬೇಕು ಎಂಬ ನಿಯಮ ಹೊರಡಿಸಲಾಗಿದ್ದು, ಈ ನಿಯಮ ಇಂದಿನಿಂದಲೇ ಜಾರಿಗೊಳ್ಳಲಿದ್ದು, ಏಪ್ರಿಲ್ 26ರವರೆಗೆ ಚಾಲ್ತಿಯಲ್ಲಿರುತ್ತದೆ.
ಇದನ್ನೂ ಓದಿ: ಆರ್ಟಿಪಿಸಿಆರ್ ಟೆಸ್ಟ್ನಿಂದ ಹೊಸ ರೂಪಾಂತರ ವೈರಸ್ ಪತ್ತೆ ಸಾಧ್ಯವಿಲ್ಲ..
ಈಗಾಗಲೇ ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ತೆಲಂಗಾಣದಿಂದ ಹೋಗುವ ಜನರಿಗೆ ಆರ್ಟಿ-ಪಿಸಿಆರ್ ವರದಿ ಕಡ್ಡಾಯಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಹಾಕಿತ್ತು. ಪಶ್ಚಿಮ ಬಂಗಾಳದಲ್ಲಿದ್ದು 12,876 ಕೋವಿಡ್ ಪ್ರಕರಣ ದಾಖಲಾಗಿದ್ದು, 59 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 74,000 ಸಕ್ರಿಯ ಪ್ರಕರಣಗಳಿವೆ.