ಈ ಸ್ಟಾರ್ಟಪ್ನ ಹೆಸರು 'ಬೆಗ್ಗರ್ಸ್ ಕಾರ್ಪೊರೇಷನ್' (ಭಿಕ್ಷುಕರ ನಿಗಮ). ಹೆಸರೇ ಹೇಳುವಂತೆ ಈ ಭಿಕ್ಷುಕರು ಭಿಕ್ಷೆ ಕೇಳುವುದಿಲ್ಲ. ಭಿಕ್ಷೆಯ ಬದಲು ಅವರು ಹೂಡಿಕೆ ಕೇಳುತ್ತಾರೆ. ಯಾರಾದರು ಈ ರೀತಿ ಹೂಡಿಕೆ ಮಾಡಿದರೆ ಅದರ ಸಹಾಯದಿಂದ ಅವರು ಉತ್ಪನ್ನವನ್ನು ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಸಿಗುವ ಲಾಭದಲ್ಲಿ ಉತ್ತಮ ರಿಟರ್ನ್ಸ್ ಪಡೆಯುತ್ತಾರೆ.
ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಕಾಶಿ ಅತ್ಯಂತ ಶ್ರೇಷ್ಠವಾದ ತಾಣ. ಈ ಸ್ಥಳದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಿದೆ. ಅದರಲ್ಲೊಬ್ಬರು 38 ವರ್ಷದ ವಿಮಲಾ ಪಠಾಕ್. ಗಂಡ ಎರಡನೇ ಮದುವೆಯಾಗಿ ತ್ಯಜಿಸಿದ ಪರಿಣಾಮ ಆಕೆ ದಿಕ್ಕು ಕಾಣದೇ ಇದೀಗ ಕಾಶಿಯಲ್ಲಿ 12 ವರ್ಷದ ಮಗನೊಂದಿಗೆ ಭಿಕ್ಷಾಟನೆ ಮಾಡುತ್ತಿದ್ದಾರೆ.
ಕಳೆದ ವರ್ಷ ಭಿಕ್ಷುಕರ ನಿಗಮಕ್ಕೆ ಸೇರಿದ ವಿಮಲಾಗೆ ಹೊಲಿಗೆ ತರಬೇತಿ ಪಡೆಯುವಂತೆ ಸಂಘಟನೆ ಕೇಳಿದೆ. ಇದಕ್ಕೆ ವಿಮಲಾ ಕೂಡ ಒಪ್ಪಿಗೆ ಸೂಚಿಸಿದ್ದರು. ಇದಕ್ಕೂ ಮುನ್ನ ಆಕೆಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಮೂಲಕ ಸ್ವಾಭಿಮಾನ, ಜನರೊಂದಿಗೆ ಮಾತನಾಡುವ ಕೌಶಲ್ಯ ಹೇಳಿಕೊಡಲಾಗಿತ್ತು.
ಇದೇ ರೀತಿ ಅನೇಕ ಎನ್ಜಿಒಗಳು ಇಂಥ ಉದ್ಯೋಗವನ್ನು ಕಾಶಿಯಲ್ಲಿ ನೀಡುತ್ತಿವೆ. ಆದರೆ, ಭಿಕ್ಷುಕರ ನಿಗಮಕ್ಕೆ ಭಿಕ್ಷುಕರ ಸೇವೆ ಪಡೆಯುವ ಫಲಾನುಭವಿ ಎಂದು ಪರಿಗಣಿಸಿಲ್ಲ. ಈ ಸಂಘಟನೆ ಅವರನ್ನು ಪಾಲುದಾರರನ್ನಾಗಿ ಪರಿಗಣಿಸಿದೆ. ಭಿಕ್ಷುಕರಿಗೆ ಯಂತ್ರ ನೀಡಲಾಯಿತು. ಅಂಗಡಿಗಳನ್ನು ನೀಡಿ, ಅವರನ್ನೇ ಮಾಲೀಕರಾಗಿ ಮಾಡಿ, ಮಹತ್ವಾಕಾಂಕ್ಷಿ ಉದ್ಯಮಿಯಾಗಿ ಮಾಡಿದ್ದಾರೆ. ಕೇವಲ ವಿಮಲಾ ಮಾತ್ರವಲ್ಲ, ಇಂತಹ 14 ಕುಟುಂಬಗಳು ಇಂದು ಸಬಲವಾಗಿವೆ.
ಇದು ಮಾಜಿ ಪತ್ರಕರ್ತರ ಕನಸು: ಒಡಿಶಾದ ಚಂದ್ರಮಿಶ್ರಾ ಈ ಸ್ಟಾರ್ಟಅಪ್ ಸ್ಥಾಪಕರು. ಮಾಜಿ ಪತ್ರಕರ್ತರಾಗಿರುವ ಅರವತ್ತು ವರ್ಷದ ಚಂದ್ರಮಿಶ್ರಾ, ದೆಹಲಿಯಲ್ಲಿ ಒಡಿಯಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗಾವಕಾಶಗಳ ಕುರಿತು ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಕೊವಿಡ್ ಲಾಕ್ಡೌನ್ ಅವಧಿಯಲ್ಲಿ ಯುವ ನಿರುದ್ಯೋಗದ ಕುರಿತು ಆನ್ಲೈನ್ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಯಲ್ಲಿ 27 ಸಾವಿರ ಮಂದಿ ಕಾಶಿಯಲ್ಲಿ ಉದ್ಯೋಗ ಕಳೆದುಕೊಂಡಿರುವುದು ಪತ್ತೆಯಾಯಿತು. ಹೀಗಾಗಿ ಪರಿಸ್ಥಿತಿ ಅವಲೋಕನಕ್ಕೆ ವಾರಾಣಾಸಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ಭಿಕ್ಷುಕರ ಬದುಕು ಕಂಡ ಅವರು ಸಂಶೋಧನೆ ಬಿಟ್ಟು ಅವರಿಗಾಗಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಮೊದಲಿಗೆ ಭಿಕ್ಷುಕರ ಮಕ್ಕಳಿಗಾಗಿ ಸ್ಕೂಲ್ ಆಫ್ ಲೈಫ್ ಎಂಬ ಶಾಲೆ ಆರಂಭಿಸಿದರು. ಇದನ್ನು ನೀಡಿದ ಅನೇಕ ಪೋಷಕರು ಚಂದ್ರಮಿಶ್ರ ಅವರ ಬಳಿ ಬಂದರು. ಅವರಿಗೆ ಏನಾದರೂ ಉದ್ಯೋಗ ಕಲ್ಪಿಸಲು ಮುಂದಾದರು.
ಸೇವೆಯ ಬದಲಾಗಿ ಸಬಲತೆಯ ಉದ್ದೇಶ: ಭಿಕ್ಷುಕರು ಸೇವೆ ನೀಡುವುದಕ್ಕಿಂತ ಸ್ಟಾರ್ಟಪ್‌ನಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಸ್ಪರ್ಧಾತ್ಮಕತೆ ಮತ್ತು ಸೃಜನಶೀಲತೆ ಹೆಚ್ಚುತ್ತದೆ ಎಂದು ಭಾವಿಸಲಾಗಿದೆ. ಅವರು ಕಂಪನಿಯ ಮಾಲೀಕರಾಗಲು ಸಹ ಆಶಿಸಿದರು. ಮಾರ್ಕೆಟಿಂಗ್ ತಜ್ಞ ಬದರಿನಾಥ್ ಮಿಶ್ರಾ ಮತ್ತು ದೇವೇಂದ್ರ ಥಾಪಾ ಅವರ ಗೆಳೆಯರೊಂದಿಗೆ ಸೇರಿ 'ಭಿಕ್ಷುಕರ ನಿಗಮ' ಆರಂಭಿಸಿದರು.
ಮೊದಲಿಗೆ ತಮ್ಮ ಸಂಸ್ಥೆಯ ವತಿಯಿಂದ ಭಿಕ್ಷುಕರಿಗಾಗಿ ‘ಬ್ಯಾಗ್ ಆಫ್ ಡ್ರೀಮ್ಸ್’ ಹೆಸರಿನ ಆಧುನಿಕ ಬ್ಯಾಗ್ ತಯಾರಿಕಾ ಯೋಜನೆ ಕೈಗೆತ್ತಿಕೊಂಡರು. 10 ಸಾವಿರ ಹೂಡಿಕೆಯೊಂದಿಗೆ ಲಾಭದ ಕುರಿತು ತಿಳಿಸಿದರು. ಇದೆಲ್ಲ ಸಾಧ್ಯವಾಗುತ್ತಾ ಎಂದು ಅನೇಕರು ಪ್ರಶ್ನಿಸಿದರು. ಆದರೆ, ಮಿಶ್ರಾ ಐಡಿಯಾವನ್ನು ದೇಶದ 5.4 ಲಕ್ಷ ಜನರು ಮೆಚ್ಚಿದರು. ಇದಕ್ಕಾಗಿ 12 ಕುಟುಂಬ ಸದಸ್ಯರಿಗೆ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಬ್ಯಾಗ್ ಉತ್ಪಾದನೆ ಮಾಡುವ ತರಬೇತಿ ನೀಡಿದರು. ಈ ಬ್ಯಾಗ್‌ಗಳನ್ನು ಹೊಟೇಲ್ಗಳಿಗೆ ಪೂರೈಕೆ ಮಾಡಿದರು.
ಕೈಗಾರಿಕೋದ್ಯಮಿಗಳಿಗೆ ತಮ್ಮ ಕಂಪನಿಯ ಬಗ್ಗೆ ವಿವರಿಸಿದ ನಂತರ, ಅವರು ತಮ್ಮ ಸಮ್ಮೇಳನಗಳಿಗೆ ಈ ಹೊಸ ಬ್ಯಾಗ್‌ಗಳನ್ನು ಪ್ರಸ್ತುತಪಡಿಸಿದರು. ಈ ನಡುವೆ ರಾಷ್ಟ್ರೀಯ ಪಕ್ಷವೊಂದು ದೆಹಲಿಯಲ್ಲಿ ಕಾರ್ಯಕಾರಿ ಕಾರ್ಯಕರ್ತರ ಸಭೆ ಕರೆದಾಗ 10 ದಿನಗಳಲ್ಲಿ 500 ಬ್ಯಾಗ್‌ಗಳನ್ನು ಪೂರೈಸಿದಾಗ ಅವರಿಗೆ ಆಶ್ಚರ್ಯವಾಯಿತು. 12 ಕುಟುಂಬಗಳಿಗೆ ರೂಪಿಸಿದ ವಿಮಲಾ ಪಾಠಕ್ ಅವರ ನೇತೃತ್ವದ ಬ್ಯಾಗ್ ಆಫ್ ಡ್ರೀಮ್ಸ್ ಪ್ರಾಜೆಕ್ಟ್ ಯಶಸ್ವಿಯಾಯಿತು. ಇದರೊಂದಿಗೆ ಭಿಕ್ಷುಕರ ನಿಗಮ, ಎರಡು ಕುಟುಂಬಗಳಿಗೆ ಪೂಜಾ ಸಾಮಗ್ರಿಗಳ ಮಾರಾಟ ಪ್ರಾರಂಭಿಸಿತು.
ಈ ಎರಡು ಯೋಜನೆಯಿಂದ ಆರು ತಿಂಗಳಲ್ಲಿ 55 ಲಕ್ಷ ಆದಾಯ ದೊರೆಯಿತು. ಹೂಡಿಕೆ ಮಾಡಿದ್ದಕ್ಕಿಂತ 10 ಪಟ್ಟು ಹೆಚ್ಚು ಲಾಭ ಪಡೆದರು. ಎಲ್ಲ ಖರ್ಚು ಕಳೆದು ಪ್ರತಿಯೊಬ್ಬ ಸದಸ್ಯ 80 ಸಾವಿರ ರೂ ಲಾಭ ಪಡೆದ. ಈ ಎರಡು ಯೋಜನೆಯ ಯಶಸ್ಸಿನಿಂದ ಭಿಕ್ಷುಕರ ಮಂಡಳಿ ಇದೀಗ ಕಾಶಿಯಲ್ಲಿ ಮನೆ ಬಾಗಿಲಿಗೆ ಪೂಜಾ ಸಾಮಗ್ರಿ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದರಿಂದ ಅನೇಕ ಕುಟುಂಬಗಳು ಭಿಕ್ಷಾಟನೆಯಿಂದ ದೂರವಾಗಲಿದೆ ಎಂದು ಚಂದ್ರಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಸಿ, ಫ್ರಿಡ್ಜ್, ಕೂಲರ್ ವ್ಯಾಪಾರಕ್ಕೆ ಬ್ರೇಕ್ ಹಾಕಿದ ಅಕಾಲಿಕ ಮಳೆ