ಕಿನ್ನೌರ್ (ಹಿಮಾಚಲ ಪ್ರದೇಶ): ಜಿಲ್ಲೆಯ ಬಟ್ಸೆರಿ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದು, ಮೂವರು ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಾವನ್ನಪ್ಪಿದವರಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪ ಶರ್ಮಾ ಕೂಡ ಒಬ್ಬರು.
ಡಾ. ದೀಪಾ ಶರ್ಮಾ ಅವರು ಜುಲೈ 25ರ ಮಧ್ಯಾಹ್ನ 12.59ಕ್ಕೆ ಟ್ವಿಟರ್ನಲ್ಲಿ ತಮ್ಮ ಕೊನೆಯ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವನು ಐಟಿಬಿಪಿ ಚೆಕ್ - ಪೋಸ್ಟ್ ಹತ್ತಿರದ ಬೋರ್ಡ್ ಬಳಿ ನಿಂತಿದ್ದಾರೆ. 'ನಾನು ಭಾರತದ ಕೊನೆಯ ಹಂತದಲ್ಲಿ ನಿಂತಿದ್ದೇನೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿಯಾಗಿದೆ.' ಎಂದು ಅವರು ಅವರು ಈ ಫೋಟೋದೊಂದಿಗೆ ಬರೆದಿದ್ದಾರೆ.
ಹಿಮಾಚಲದ ಸುಂದರ ಪ್ರದೇಶಗಳನ್ನು ನೋಡಲು 34 ವರ್ಷದ ಡಾ.ದೀಪ ಜೈಪುರದಿಂದ ಬಂದಿದ್ದರು. ಆದರೆ, ಈ ಸುಂದರ ಪಯಣ ಅವರ ಕೊನೆಯ ಪ್ರಯಾಣ ಎಂದು ಅವರಿಗೆ ತಿಳಿದಿರಲಿಲ್ಲ. ದೀಪಾ ತನ್ನ ಪ್ರಯಾಣದ ಚಿತ್ರಗಳನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದರು.
ಡಾ. ದೀಪಾ ಚಿಟ್ಕುಲ್ನಿಂದ ಹಿಂದಿರುಗುತ್ತಿದ್ದಾಗ, ಸುಮಾರು 13 ಕಿ.ಮೀ ದೂರದಲ್ಲಿರುವ ಬಟ್ಸೆರಿಯಲ್ಲಿ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳ ಉರುಳಲು ಪ್ರಾರಂಭವಾಯಿತು. ಪರಿಣಾಮವಾಗಿ ದೀಪಾ ಸೇರಿದಂತೆ 9 ಜನರು ಸಾವನ್ನಪ್ಪಿದರು. ಡಾ. ದೀಪಾ ಅವರು ತಮ್ಮ ಸಾವಿಗೆ ಕೆಲವೇ ಕ್ಷಣಗಳ ಮೊದಲು ಭಾರತದ ಕೊನೆಯ ಹಳ್ಳಿಯಿಂದ ಹಂಚಿಕೊಂಡ ಚಿತ್ರಗಳು ಯಾವತ್ತೂ ಜೀವಂತವಾಗಿರಲಿದೆ.