ರಾಜಸ್ಥಾನ : ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡು ಪ್ರಾಣಿಗಳು ತಪ್ಪಿಸಿಕೊಂಡು ವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ನಿನ್ನೆ ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ರಣಥಂಬೋರ್ ರೆಸಾರ್ಟ್ ಪ್ರದೇಶದಲ್ಲಿ ಕರಡಿಯೊಂದು ಓಡಾಡುತ್ತಿರುವುದು ಕಂಡು ಬಂದಿದೆ. ಸುಮಾರು 20-25 ನಿಮಿಷಗಳ ಕಾಲ ಅದು ಅಲ್ಲಿಯೇ ರಾಜಾರೋಷವಾಗಿ ಸುತ್ತಾಡಿದೆ. ಕರಡಿಯನ್ನು ಕಂಡ ರೆಸಾರ್ಟ್ ಸಿಬ್ಬಂದಿ ಹೊರ ಬರುವ ಧೈರ್ಯ ಮಾಡಿಲ್ಲ.
ಹೊಸ ಪರಿಸರದಲ್ಲಿ ಒಂದೊಳ್ಳೆ ವಾಕ್ ಮಾಡಿರುವ ಕರಡಿ ಮತ್ತೆ ಕಾಡಿಗೆ ವಾಪಸ್ ಹೋಗಿದೆ. ರಣಥಂಬೋರ್ ರೆಸಾರ್ಟ್‌ಗೆ ಕರಡಿ ನುಗ್ಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ : ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಇಬ್ಬರು ಸಾವು, ಮೂವರಿಗೆ ಗಾಯ