ETV Bharat / bharat

ಸಾಧ್ಯವಾದಾಗಲೆಲ್ಲಾ ದಯೆಯಿಂದಿರಿ: ವಿಶ್ವ ದಯೆ ದಿನ 2022 - Kindness Day

ಜನರಲ್ಲಿ ದಯೆಯ ಭಾವನೆಯನ್ನು ಜಾಗೃತಗೊಳಿಸಲು ಮತ್ತು ಶಾಂತಿಯನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ.

"Be kind whenever possible": World Kindness Day 2022
"ಸಾಧ್ಯವಾದಾಗಲೆಲ್ಲಾ ದಯೆಯಿಂದಿರಿ": ವಿಶ್ವ ದಯೆ ದಿನ 2022
author img

By

Published : Nov 12, 2022, 5:40 PM IST

ಹೈದರಾಬಾದ್: ಮಾನವನನ್ನು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿಗಳೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ ಮಾನವನು ಇತರ ಪ್ರಾಣಿಗಳ, ಸಸ್ಯಗಳ ಮತ್ತು ಕೀಟಗಳ ಬಗ್ಗೆ ಹೊಂದಿರುವ ಸಹಾನುಭೂತಿಯ ಭಾವನೆ. ಜಗತ್ತನ್ನು ಜಾತಿ,ಮತ, ಧರ್ಮದ ಚೌಕಟ್ಟಿನಿಂದ ಏಕತೆಯ ಬಂಧನದಲ್ಲಿ ಬಂಧಿಸುವ ಏಕೈಕ ಸಾಧನ ಎಂದರೆ ದಯೆ.

ಆದರೂ ಈ ಪ್ರಪಂಚದಲ್ಲಿ ಕರುಣೆ ಇಲ್ಲದ ಮನುಜರು ಇದ್ದಾರೆ. ಇದಕ್ಕೆ ಇತ್ತೀಚಿಗಿನ ಉದಾಹರಣೆಯೆಂದರೆ ರಷ್ಯಾ - ಉಕ್ರೇನ್ ಯುದ್ಧ. ಈ ಯದ್ಧವನ್ನು ಸಾಮಾನ್ಯ ಮನುಷ್ಯರೇ ಮಾಡಿದ್ದು ಸಾವಿರಾರು ಜನರ, ಸೈನಿಕರ, ಪ್ರಾಣಿಗಳ ಜೀವ ಹೋಗಲು ಕಾರಣವಾಗಿದ್ದಾರೆ, ಇದೇ ಯುದ್ಧ ಇನ್ನೂ ಮುಂದುವರೆಯುತ್ತಲೇ ಇದೆ.

ಜನರಲ್ಲಿ ದಯೆಯ ಭಾವನೆಯನ್ನು ಜಾಗೃತಗೊಳಿಸಲು ಮತ್ತು ಶಾಂತಿಯನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ. "ಸಾಧ್ಯವಾದಾಗಲೆಲ್ಲಾ ದಯೆಯಿಂದಿರಿ" ಎಂಬುದು ಈ ಬಾರಿಯ ಥೀಮ್ ಆಗಿರುವುದರ ಜೊತೆಗೆ, ಜನರಿಗೆ ದಯೆಯ ಶಕ್ತಿ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಪ್ರಭಾವದ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಈ ದಿನವನ್ನು ವಿಶ್ವಸಂಸ್ಥೆಯು ಗುರುತಿಸದಿದ್ದರೂ, ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಹಾಗೆ ಈ ಒಂದು ದಿನವು ಅಗತ್ಯ ಇರುವವರಿಗೆ ಸಹಾಯ ಮಾಡಲು ಹೊರಡುವ ಎಲ್ಲ ರೀತಿಯ ದಯಾ ಹೃದಯಿಗಳ ಆಚರಣೆಯಾಗಿದೆ.

ವಿಶ್ವ ದಯೆ ಆಂದೋಲನದಲ್ಲಿ 27 ದೇಶಗಳು ಭಾಗಿ: 1998 ರಲ್ಲಿ ಟೋಕಿಯೊ ಸಮ್ಮೇಳನದಲ್ಲಿ 'ದಯೆ ದಿನ' ಪರಿಕಲ್ಪನೆಯನ್ನು ಮೊದಲು ಪರಿಚಯಿಸಲಾಯಿತು. ಇದು ಈಗ ವಿಶ್ವಾದ್ಯಂತ ಆಚರಣೆಯಾಗಿ ಮಾರ್ಪಟ್ಟಿದೆ, ಒಂದು ರೀತಿಯಲ್ಲಿ ಹೃದಯವು ಜಗತ್ತನ್ನು ಹೇಗೆ ಒಂದುಗೂಡಿಸುತ್ತದೆ ಎಂಬುದನ್ನು ಎಲ್ಲರಿಗೂ ನೆನಪಿಸುತ್ತದೆ.

ವಿಶ್ವ ದಯೆ ಆಂದೋಲನವು ವಿವಿಧ ದೇಶಗಳ ಅನೇಕ ಸಣ್ಣ ಸಂಸ್ಥೆಗಳನ್ನು ಒಟ್ಟುಗೂಡಿಸುತ್ತಿದ್ದು ಪ್ರಸ್ತುತ, 27ಕ್ಕೂ ಹೆಚ್ಚು ದೇಶಗಳು ವಿಶ್ವ ದಯೆ ಆಂದೋಲನದಲ್ಲಿ ಭಾಗವಹಿಸಿವೆ ಮತ್ತು ವಿಶ್ವ ದಯೆ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿವೆ.

ಇವುಗಳಲ್ಲಿ ಭಾರತ, ಕೆನಡಾ, ಬ್ರೆಜಿಲ್, ಯುಎಸ್ಎ, ಜಪಾನ್, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಟಲಿಯೂ ಸೇರಿವೆ. ಪ್ರತಿ ವರ್ಷ ಹೆಚ್ಚು ಹೆಚ್ಚು ದೇಶಗಳು ಈ ದಿನದ ಆಚರಣೆಯಲ್ಲಿ ಭಾಗವಹಿಸುತ್ತವೆ. ವಿಶ್ವ ದಯೆ ದಿನವು ಪ್ರಪಂಚವು ಜಾಗತಿಕ ಸಮುದಾಯವಾಗಿ ಶಾಂತಿಯುತವಾಗಿ ಮುಂದುವರಿಯಲು ಪರಸ್ಪರ ದಯೆ ತೋರುವ ಅಗತ್ಯವನ್ನು ಒತ್ತಿಹೇಳುವ ಜಾಗತಿಕ ಅವಲೋಕನವಾಗಿದೆ.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಇಂದು 6 ಮಂದಿ ಅಪರಾಧಿಗಳು ಬಿಡುಗಡೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.