ಶ್ರೀನಗರ(ಜಮ್ಮುಕಾಶ್ಮೀರ): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕರ್ಹಾಮಾ ಕುಂಜರ್ ಪ್ರದೇಶದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಒರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹತ್ಯೆಯಾದ ಭಯೋತ್ಪಾದಕನನ್ನು ಎಲ್ಇಟಿಗೆ ಸೇರಿದ ಅಬಿದ್ ವಾನಿ ಎಂದು ಗುರುತಿಸಲಾಗಿದೆ. ಆತನಿಂದ ದೋಷಾರೋಪಣೆಯ ವಸ್ತುಗಳು ಮತ್ತು1 ಎಕೆ 47 ರೈಫಲ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮತ್ತು ಸೇನೆಯ ಜಂಟಿ ತಂಡ ಕರ್ಹಾಮಾ ಕುಂಜರ್‌ನಲ್ಲಿ ರಾತ್ರಿಯ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ವರದಿಯಾಗಿದೆ. ರಕ್ಷಣಾ ಪಡೆಗಳ ಜಂಟಿ ತಂಡ ಶಂಕಿತ ಸ್ಥಳದ ಕಡೆಗೆ ಸಮೀಪಿಸುತ್ತಿದ್ದಂತೆ ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಸದ್ಯ ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
-
#WATCH| J&K: Encounter underway in Karhama Kunzer area of Baramulla
— ANI (@ANI) May 6, 2023 " class="align-text-top noRightClick twitterSection" data="
(Visuals deferred by unspecified time) pic.twitter.com/jpv0iiK6Ve
">#WATCH| J&K: Encounter underway in Karhama Kunzer area of Baramulla
— ANI (@ANI) May 6, 2023
(Visuals deferred by unspecified time) pic.twitter.com/jpv0iiK6Ve#WATCH| J&K: Encounter underway in Karhama Kunzer area of Baramulla
— ANI (@ANI) May 6, 2023
(Visuals deferred by unspecified time) pic.twitter.com/jpv0iiK6Ve
ರಜೌರಿಯಲ್ಲೂ ಗುಂಡಿನ ಚಕಮಕಿ: ರಜೌರಿಯ ಕಂಡಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಜಮ್ಮುವಿನ ಪಿಆರ್‌ಒ ಶನಿವಾರ ತಿಳಿಸಿದ್ದಾರೆ. ಶುಕ್ರವಾರ (ಮೇ.5) ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಕಂಡಿ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದರು.
-
#BaramullaEncounterUpdate: Killed #terrorist identified as Abid Wani S/O Mohd Rafiq Wani R/O Yarhol Babapora Kulgam, linked with proscribed #terror outfit LeT. Incriminating materials, 01 AK 47 rifle recovered.@JmuKmrPolice https://t.co/U5iocqLfKW
— Kashmir Zone Police (@KashmirPolice) May 6, 2023 " class="align-text-top noRightClick twitterSection" data="
">#BaramullaEncounterUpdate: Killed #terrorist identified as Abid Wani S/O Mohd Rafiq Wani R/O Yarhol Babapora Kulgam, linked with proscribed #terror outfit LeT. Incriminating materials, 01 AK 47 rifle recovered.@JmuKmrPolice https://t.co/U5iocqLfKW
— Kashmir Zone Police (@KashmirPolice) May 6, 2023#BaramullaEncounterUpdate: Killed #terrorist identified as Abid Wani S/O Mohd Rafiq Wani R/O Yarhol Babapora Kulgam, linked with proscribed #terror outfit LeT. Incriminating materials, 01 AK 47 rifle recovered.@JmuKmrPolice https://t.co/U5iocqLfKW
— Kashmir Zone Police (@KashmirPolice) May 6, 2023
ಇದನ್ನೂ ಓದಿ: ಕುಪ್ವಾರದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ
ಅಧಿಕಾರಿಗಳ ಪ್ರಕಾರ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಜಮ್ಮು ಪ್ರದೇಶದ ಭಾಟಾ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ನ ಮೇಲೆ ಹೊಂಚುದಾಳಿ ನಡೆಸಿದ ಭಯೋತ್ಪಾದಕರ ಗುಂಪನ್ನು ಹೊರಹಾಕಲು ಭಾರತೀಯ ಸೇನೆಯು ನಿರಂತರ ಗುಪ್ತಚರ ಆಧಾರಿತ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
"ರಾಜೌರಿ ವಲಯದ ಕಂಡಿ ಅರಣ್ಯದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೇ 3ರಂದು ಜಂಟಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಮೇ 5ರಂದು ಬೆಳಗ್ಗೆ 7:30ಕ್ಕೆ, ಶೋಧ ತಂಡ ಒಂದು ಭಯೋತ್ಪಾದಕರ ಗುಂಪನ್ನು ಪತ್ತೆ ಮಾಡಿದೆ. ಭಯೋತ್ಪಾದಕರು ಗುಹೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ. ಈ ಪ್ರದೇಶ ಕಡಿದಾದ ಬಂಡೆಗಳಿಂದ ಹಾಗೂ ದಟ್ಟವಾದ ಸಸ್ಯಗಳಿಂದ ಕೂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಉಗ್ರರ ಗುಂಪು ಸಿಕ್ಕಿಬಿದ್ದಿದೆ. ಭಯೋತ್ಪಾದಕ ಗುಂಪಿನಲ್ಲಿಯೂ ಕೆಲವರು ಸಾವನಪ್ಪಿರುವ ಸಾಧ್ಯತೆಯಿದೆ.
ಇದನ್ನೂ ಓದಿ: 24 ಗಂಟೆ ಅವಧಿಯಲ್ಲಿ 2ನೇ ಎನ್‌ಕೌಂಟರ್: ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ