ವಿಜಯವಾಡ: ಕೇಂದ್ರಾಡಳಿತ ಪ್ರದೇಶವಾದ ಯಾನಂನಲ್ಲಿ ಯುಕೋ ಬ್ಯಾಂಕ್ ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀಕಾಂತ್ (33) ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಗೋಪಾಲ್ ನಗರದಲ್ಲಿ ವಾಸವಾಗಿದ್ದರು. ಶ್ರೀಕಾಂತ್ ತಮ್ಮ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಟುಂಬಸ್ಥರು ಯಾನಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಂಚನಾಮೆ ನಡೆಸಿದ ಪೊಲೀಸರು ಬಳಿಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದಾರೆ. ಆತ್ಮಹತ್ಯೆಗೆ ಆರ್ಥಿಕ ತೊಂದರೆಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆ ಮಚಲಿಪಟ್ಟಣ ಶಾಖೆಯಲ್ಲಿ ಮೂರು ವರ್ಷ ಮ್ಯಾನೇಜರ್ ಆಗಿ ಕೆಲಸ ಮಾಡಿದಾಗ ಮೀನುಗಳ ಕೆರೆ ನಿರ್ವಹಣೆಗೆ ಬ್ಯಾಂಕ್ ವತಿಯಿಂದ ಸಾಲ ಮಂಜೂರಾಗಿದ್ದು, ಫಲಾನುಭವಿಗಳು ಸರಿಯಾಗಿ ಕಂತು ಕಟ್ಟದೇ ಇವರೇ ಹಣ ಪಾವತಿಸಿದ್ದರು ಎನ್ನಲಾಗಿದೆ.
ಅವರು ಯಾನಂಗೆ ಬಂದ ನಂತರವೂ ಇನ್ನೂ 35 ಲಕ್ಷ ಸಾಲ ಬಾಕಿ ಇತ್ತು. ಇದನ್ನು ಪಾವತಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ, ಮೇಲಧಿಕಾರಿಗಳ ಒತ್ತಡ ಹೆಚ್ಚಾದ ಕಾರಣ ತೀವ್ರ ಖಿನ್ನತೆಗೆ ಒಳಗಾಗಿ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ