ETV Bharat / bharat

ಮಾಸ್ಕ್​​ ಹಾಕದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಬ್ಯಾಂಕ್ ಭದ್ರತಾ ಸಿಬ್ಬಂದಿ! - ಮಾಸ್ಕ್ ಧರಿಸದ್ದಕ್ಕೆ ಗುಂಡಿನ ದಾಳಿ

ಕ್ಷುಲ್ಲಕ ಕಾರಣಕ್ಕೆ ಉತ್ತರ ಪ್ರದೇಶದ ಬರೈಲಿಯ ಬ್ಯಾಂಕೊಂದರಲ್ಲಿ ಗ್ರಾಹಕನ ಮೇಲೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾನೆ.

bank-guard-shoots-customer-in-bareilly-for-not-wearing-masks
ಮಾಸ್ಕ್​​ ಹಾಕದ್ದಕ್ಕೆ ಗ್ರಾಹಕನ ಮೇಲೆ ಗುಂಡು ಹಾರಿಸಿದ ಬ್ಯಾಂಕ್ ಭದ್ರತಾ ಸಿಬ್ಬಂದಿ
author img

By

Published : Jun 26, 2021, 7:54 AM IST

Updated : Jun 26, 2021, 8:01 AM IST

ಬರೈಲಿ, ಉತ್ತರ ಪ್ರದೇಶ: ಬ್ಯಾಂಕ್​ಗೆ ತೆರಳಿದ ಗ್ರಾಹಕನೋರ್ವ ಮಾಸ್ಕ್ ಧರಿಸದ ಕಾರಣಕ್ಕೆ ಅಲ್ಲಿನ ಭದ್ರತಾ ಸಿಬ್ಬಂದಿ ಗ್ರಾಹಕನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ. ಘಟನೆಯಲ್ಲಿ ಗ್ರಾಹಕ ಗಾಯಗೊಂಡಿದ್ದಾನೆ.

ಬರೋಡಾದ ಸ್ಟೇಷನ್ ರಸ್ತೆಯಲ್ಲಿರುವ ಬರೈಲಿ ಬ್ರಾಂಚ್​ನಲ್ಲಿ ಘಟನೆ ನಡೆದಿದ್ದು, ಗಾಯಾಳುವನ್ನು ರಾಜೇಶ್​ಕುಮಾರ್ ಎಂದು ಗುರುತಿಸಲಾಗಿದೆ. ರಾಜೇಶ್ ಕುಮಾರ್​ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: DRDOದಿಂದ ಮತ್ತೊಂದು ಮೈಲಿಗಲ್ಲು.. ಸುಧಾರಿತ ಪಿನಾಕಾ ರಾಕೆಟ್​ ಪ್ರಯೋಗ ಸಕ್ಸಸ್​

ಶುಕ್ರವಾರ ತನ್ನ ಖಾತೆಯಿಂದ ಹಣವನ್ನು ಪಡೆಯುವ ಸಲುವಾಗಿ ರಾಜೇಶ್​​ಕುಮಾರ್ ಬ್ಯಾಂಕ್​ಗೆ ತೆರಳಿದ್ದನು. ಈ ವೇಳೆ ಮಾಸ್ಕ್ ಧರಿಸದ ಕಾರಣ ಅಲ್ಲಿನ ಬ್ಯಾಂಕ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕೇಶವ್ ಅವರು ರಾಜೇಶ್​​ಕುಮಾರ್​ನನ್ನು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿ ಕೇಶವ್​ ಗ್ರಾಹಕನ ಗುಂಡು ಹಾರಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಕೇಶವ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಜೇಶ್​ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Last Updated : Jun 26, 2021, 8:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.