ಗೊರಕೆ ಹೊಡೆಯುವ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಇದು ಸುತ್ತಮುತ್ತಲಿನವರಿಗೂ ಕಿರಿಕಿರಿ. ಅತಿಯಾದ ಗೊರಕೆ ಹೊಡೆಯುವುದು ಆರೋಗ್ಯ ದೃಷ್ಟಿಯಿಂದ ಕೂಡ ಉತ್ತಮವಲ್ಲ. ಈ ಗೊರಕೆ ಹೊಡೆಯುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಪರಿಹಾರ ಮಾರ್ಗಗಳನ್ನು ಹುಡುಕುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಇದಕ್ಕೆ ಪರಿಹಾರ ಎಂಬಂತೆ ಇದೀಗ ಬನಾರಸ್ ಹಿಂದೂ ಯುನಿವರ್ಸಿಟಿ ಮಷಿನ್ ಒಂದನ್ನು ಕಂಡು ಹಿಡಿದಿದೆ.
ಹೇಗೆ ಕಾರ್ಯ ನಿರ್ವಹಿಸಿಲಿದೆ: ಗೊರಕೆ ಸದ್ದಿನಿಂದಾಗಿ ಉಂಟಾಗುವ ಕಿರಿಕಿರಿ ತಪ್ಪಿಸಲು ಬನರಾಸ್ ವಿಶ್ವವಿದ್ಯಾಲಯ ಕಂಡು ಹಿಡಿದಿರುವ ಈ ಯಂತ್ರವನ್ನು ವಸಡಿನ ಬಳಿ ಇಟ್ಟು ರಾತ್ರಿ ಮಲಗಬೇಕು. ಇದರಿಂದ ಗೊರಕೆ ಸದ್ದು ನಿಲ್ಲುತ್ತದೆ. ಇದನ್ನು ಕೇಳಿದರೆ ನೀವು ಅಚ್ಚರಿಗೆ ಒಳಗಾಗಬಹುದು. ಆದರೆ, ಅಂತಹ ಅಚ್ಚರಿ ಪಡುವ ಅಗತ್ಯವಿಲ್ಲ. ಕಾಶಿ ಹಿಂದೂ ವಿಶ್ವವಿದ್ಯಾಲದಯದ ಐಎಮ್ಎಸ್ ಬಿಎಚ್ಯು7 ವರ್ಷಗಳ ಕಠಿಣ ಶ್ರಮದಿಂದಾಗಿ ಈ ಯಂತ್ರವನ್ನು ತಯಾರಿಸಿದ್ದಾರೆ.
ಬನರಾಸ್ ಹಿಂದೂ ವಿಶ್ವವಿದ್ಯಾಲಯದ ಟ್ರಾಮಾ ಸೆಂಟರ್ನ ಡೆಂಟಲ್ ಮೆಡಿಸಿನ್ ಡಿಪಾರ್ಟಮೆಂಟ್ ಆಫ್ ಚೆಸ್ಟ್ ಮತ್ತು ಟಿಬಿ ಡೀಸಿಸ್ ಕಳೆದ ಏಂಟು ವರ್ಷಗಳ ಹಿಂದಿ ಈ ಯಂತ್ರದ ಸಂಶೋಧನೆಗೆ ಮುಂದಾಯಿತು. ಇದೀಗ ಈ ಸಂಶೋಧನೆ ಪೂರ್ಣಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ಯಾರು ಬೇಕಾದರೂ ಈ ಯಂತ್ರವನ್ನು ಕೊಂಡು ಬಳಕೆ ಮಾಡಬಹುದಾಗಿದೆ. ಇದು ಗೊರಕೆಯ ಶಬ್ಧವನ್ನು ಶೇ 10ರಷ್ಟ ಪ್ರತಿಶತ ಕಡಿಮೆ ಮಾಡಲಿದೆ.
ಬಿಎಚ್ಯುನಿಂದ ಹೊಸ ಯಂತ್ರ: ದಂತವೈದ್ಯಕೀಯ ವಿಭಾಗ ಪ್ರೋ. ಟಿಪಿ ಚತುರ್ವೇದಿ ಈ ಸಾಧನವನ್ನು ತಯಾರಿಸಿದ್ದಾರೆ. 8 ವರ್ಷಗಳ ಸಂಶೋಧನೆಗೆ ಫಲವಾಗಿ ಈ ಯಂತ್ರ ಸೃಷ್ಟಿಯಾಗಿದೆ. ಇದನ್ನು ಎದೆರೋಗ ವಿಭಾಗದ ವೈದ್ಯರ ಸಹಕಾರದಿಂದಾಗಿ ಮಾಡಲಾಗಿದೆ. ಇದಕ್ಕಾಗಿ 7ರಿಂದ 8 ವರ್ಷ ಸಮಯ ಬೇಕಾಯಿತು. ಗೊರಕೆ ಸಮಸ್ಯೆಯ ಚಿಕಿತ್ಸಾ ಪರಿಹಾರಕ್ಕೆ ಜನರು 2 ಲಕ್ಷ ರೂವರೆಗೆ ಖರ್ಚು ಮಾಡುತ್ತಾರೆ. ಆದರೆ, ಈ ಯಂತ್ರ ಕೇವಲ 20 ಸಾವಿರಕ್ಕೆ ಲಭ್ಯವಿದೆ ಎಂದಿದ್ದಾರೆ.
6 ತಿಂಗಳಲ್ಲಿ ಚಿಕಿತ್ಸೆ ಶುರು: ಚುತುರ್ವೇದಿ ಅವರು ತಿಳಿಸುವಂತೆ ಮುಂದಿನ ಆರು ತಿಂಗಳಲ್ಲಿ ಈ ಯಂತ್ರದ ಸಹಾಯದಿಂದ ರೋಗಿಗಳ ಚಿಕಿತ್ಸೆ ಆರಂಭಿಸಲಾಗುವುದು. ಈಗಾಗಲೇ ಅನೇಕ ರೋಗಿಗಳ ಮೇಲೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಅನೇಕರಿಗೆ ಗೊರಕೆ ಸಮಸ್ಯೆಗೆ ಇದು ಪರಿಹಾರವನ್ನು ನೀಡಿದೆ. ಈ ಯಂತ್ರವನ್ನು ವಸಡಿನ ಭಾಗ ಇರಿಸಬೇಕು. ಇದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದಿದ್ದಾರೆ.
ಮೂರನೇ ಒಂದು ಜನರಲ್ಲಿದೆ ಈ ಗೊರಕೆ ಸಮಸ್ಯೆ: ಭಾರತದಲ್ಲಿ ಮೂರನೇ ಒಂದು ಜನರು ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶೇ 80ರಷ್ಟು ಜನರು ಈ ಸಮಸ್ಯೆಗೆ ಚಿಕಿತ್ಸೆ ಪಡೆದಿಲ್ಲ. ಉಳಿದ ಜನರು ಪರೀಕ್ಷೆ ಮತ್ತು ಉಸಿರಾಟ ರೋಗ ವಿಭಾದಲ್ಲಿ ಪರೀಕ್ಷೆಗೆ ಒಳಗಾಗುತ್ತಾರೆ. ಅವರು ಚಿಕಿತ್ಸೆಗೆ ವೆಚ್ಚ ಮಾಡುವ ಅರ್ಧಕ್ಕಿಂತ ಕಡಿಮೆ ದುಡ್ಡಿನಲ್ಲಿ ಈಗ ಈ ಯಂತ್ರದಿಂದ ಪರಿಹಾರ ಕಾಣಬಹುದಾಗಿದೆ. ಮಂದಿನ ಆರು ತಿಂಗಳಲ್ಲಿ ಈ ಸಮಸ್ಯೆ ಸುಲಭವಾಗಿ ಪರಿಹಾರ ಆಗಲಿದೆ ಎನ್ನತ್ತಾರೆ ಅವರು.
ಇದನ್ನೂ ಓದಿ: ಉತ್ತಮ ನಿದ್ರೆಗೆ ಸಹಾಯಕವಾಗಲಿವೆ ಈ 5 ನೈಸರ್ಗಿಕ ಗಿಡಮೂಲಿಕೆಗಳು!