ನವದೆಹಲಿ: ದೆಹಲಿಯಲ್ಲಿ ಉಂಟಾಗಿರುವ ವಾಯುಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಡಿಸೆಂಬರ್ 7ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಟ್ರಕ್ಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದೆ.
ದೆಹಲಿ ಪರಿಸರ ಸಂರಕ್ಷಣೆ ಖಾತೆ ಮಂತ್ರಿ ಗೋಪಾಲ್ ರಾಯ್ ಈ ನಿರ್ಧಾರ ಕೈಗೊಂಡಿದ್ದು, ಬರುವ ಡಿಸೆಂಬರ್ 7ರವರೆಗ ಟ್ರಕ್ಗಳ ಓಡಾಟದ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಅಗತ್ಯ ವಸ್ತುಗಳ ಟ್ರಕ್ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಸಿಬ್ಬಂದಿಗಳಿಗೋಸ್ಕರ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ, ಕಟ್ಟಡ ನಿರ್ಮಾಣ ಕಾರ್ಯ ಸಹ ಸ್ಥಗಿತಗೊಳ್ಳಲಿದೆ ಎಂದರು.
-
All construction & demolition activities would remain suspended in Delhi till further orders. Rs 5000 would be credited in accounts of labourers. There would be a ban on trucks entering Delhi till Dec 7, except under Essential Services: Gopal Rai, Delhi Environment Minister 1/2 pic.twitter.com/CTp6KOIe2V
— ANI (@ANI) November 29, 2021 " class="align-text-top noRightClick twitterSection" data="
">All construction & demolition activities would remain suspended in Delhi till further orders. Rs 5000 would be credited in accounts of labourers. There would be a ban on trucks entering Delhi till Dec 7, except under Essential Services: Gopal Rai, Delhi Environment Minister 1/2 pic.twitter.com/CTp6KOIe2V
— ANI (@ANI) November 29, 2021All construction & demolition activities would remain suspended in Delhi till further orders. Rs 5000 would be credited in accounts of labourers. There would be a ban on trucks entering Delhi till Dec 7, except under Essential Services: Gopal Rai, Delhi Environment Minister 1/2 pic.twitter.com/CTp6KOIe2V
— ANI (@ANI) November 29, 2021
ಇದನ್ನೂ ಓದಿ: ಆಂಧ್ರಪ್ರದೇಶ: ಪೊಲೀಸರ ಮುಂದೆ ಶರಣಾದ ಮಾವೋವಾದಿ ನಾಯಕಿ
ದೆಹಲಿಯಲ್ಲಿ ವಾಯುಮಾಲಿನ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಪರಿಣಾಮ ಕಳೆದ ವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜೊತೆಗೆ, ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿತ್ತು. ಇಷ್ಟಾದರೂ ದೆಹಲಿ-ಎನ್ಸಿಆರ್ನ ವಾಯುಮಾಲಿನ್ಯ ಹತೋಟಿಗೆ ಬಾರದ ಕಾರಣ ಇದೀಗ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ಕಾರಣ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ತೊಂದರೆಗೊಳಗಾಗಿದ್ದು, ಜೀವನ ನಡೆಸಲು ರಾಜ್ಯ ಸರ್ಕಾರ 5 ಸಾವಿರ ರೂ. ಪರಿಹಾರ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.