ETV Bharat / bharat

ಇಲ್ಲಿ ಮಗುವಿಗೆ ಜನ್ಮ ನೀಡುವುದು ನಿಷಿದ್ಧ! ಹೆರಿಗೆಗಾಗಿ ಗ್ರಾಮದ ಗಡಿ ದಾಟಬೇಕು

ಗ್ರಾಮದಲ್ಲಿ ವಾಸಿಸುವ ಯಾರೂ ಈ ಗ್ರಾಮದಲ್ಲಿ ಹುಟ್ಟಿದವರಲ್ಲ. ಏಳುನೂರು ಜನಸಂಖ್ಯೆಯಿರುವ ಗ್ರಾಮದಲ್ಲಿ ತನ್ನ ಹೊಕ್ಕುಳಬಳ್ಳಿ ಹುಟ್ಟುವಾಗಲೇ ಸಾವನ್ನಪ್ಪಿತು ಎಂದು ಹೇಳಿಕೊಳ್ಳುವ ಒಬ್ಬ ತಾಯಿಯೂ ಸಿಗುವುದಿಲ್ಲ. ಯಾಕೆಂದರೆ ಈ ಹಳ್ಳಿಯಲ್ಲಿ ಜನ್ಮ ನೀಡಿದರೆ ಮಗು ಸಾಯುತ್ತದೆ ಎನ್ನುವ ನಂಬಿಕೆಯಿಂದ ಬೇರೊಂದು ಹಳ್ಳಿಗೆ ಹೋಗಿಯೇ ಹೆರಿಗೆ ಮಾಡಿಸಿಕೊಂಡು ಬರುತ್ತಾರೆ ಮಹಿಳೆಯರು. ಹಾಗಾಗಿ ಪ್ರತಿ ಗರ್ಭಿಣಿಯೂ ಸಂಪ್ರದಾಯದ ಹೆಸರಲ್ಲಿ ಹಳ್ಳಿ ತೊರೆಯಲೇಬೇಕು ಎನ್ನುವ ನೋವು ಅನುಭವಿಸುತ್ತಿದ್ದಾರೆ.

Ban on child birth in Sanka Shyam village
ಶಾಪಗ್ರಸ್ತ ಗ್ರಾಮ: ಇಲ್ಲಿ ಮಗುವಿಗೆ ಜನ್ಮ ನೀಡುವುದು ನಿಷಿದ್ಧ
author img

By

Published : Nov 13, 2022, 12:10 PM IST

Updated : Nov 13, 2022, 1:15 PM IST

ಭೋಪಾಲ್ (ಮಧ್ಯಪ್ರದೇಶ): ಸಾಮಾನ್ಯವಾಗಿ ಹೆಚ್ಚಿನವರು ತಾವು ಹುಟ್ಟಿದ ಊರಲ್ಲೇ ಬೆಳೆದು ಶಿಕ್ಷಣಕ್ಕಾಗಿಯೋ, ಉದ್ಯೋಗಕ್ಕಾಗಿಯೋ, ಇಲ್ಲ ಮದುವೆಯಾಗಿಯೋ ಬೇರೊಂದು ಊರು ಸೇರಿಕೊಳ್ಳುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಈ ಹಳ್ಳಿಯಲ್ಲಿ ಮಗುವಿಗೆ ಜನ್ಮ ನೀಡಬೇಕಾದರೆನೇ ಬೇರೆ ಊರಿಗೆ ಹೋಗಬೇಕು. ಹಳ್ಳಿಯ 100 ವರ್ಷದ ತಾತನಿಂದ ಹಿಡಿದು 2 ವರ್ಷದ ಮಗುವಿನವರೆಗೂ ಯಾರೂ ಈ ಊರಿನಲ್ಲಿ ಹುಟ್ಟಿದವರೇ ಅಲ್ಲ. ಇದು ರಾಜ್​ಗಢ್​ ಜಿಲ್ಲೆಯ ಸಂಕ ಶ್ಯಾಮ್​ ಗ್ರಾಮ. ಹೀಗೊಂದು ವಿಶೇಷ ಹಳ್ಳಿಯ ಕಥೆ ಇಲ್ಲಿದೆ.

ಭೋಪಾಲ್​ನ ಈ ಹಳ್ಳಿಯಲ್ಲಿ ಯಾರೂ ಮಗು ಹೆರುವಂತಿಲ್ಲ. ಮಗುವಿಗೆ ಜನ್ಮ ನೀಡಬೇಕಾದರೆ ಬೇರೊಂದು ಹಳ್ಳಿಗೆ ಪಯಣಿಸಲೇಬೇಕು. ಇದು ಯಾವುದೇ ಪಂಚಾಯಿತಿ ಅಥವಾ ಸರ್ಕಾರ ವಿಧಿಸಿದ ನಿಯಮವೇನಲ್ಲ. ಮೂಢನಂಬಿಕೆಗೆ ಸಿಲುಕಿ ಇಡೀ ಹಳ್ಳಿಯೇ ಸ್ವತಃ ತಮ್ಮ ಕುಟುಂಬಗಳ ಮೇಲೆ ಹೇರಿಕೊಂಡಿರುವ ನಿಯಮಗಳಷ್ಟೇ. ಅಷ್ಟೇ ಅಲ್ಲ, ಈ ನಿರ್ಬಂಧಕ್ಕೆ ಜನರು ಸಂಪ್ರದಾಯದ ಹೆಸರು ಕೊಟ್ಟುಕೊಂಡಿದ್ದಾರೆ.

ಗ್ರಾಮದಲ್ಲಿ ವಾಸಿಸುವ ಯಾರೂ ಈ ಗ್ರಾಮದಲ್ಲಿ ಹುಟ್ಟಿದವರಲ್ಲ. ಏಳುನೂರು ಜನಸಂಖ್ಯೆಯಿರುವ ಗ್ರಾಮದಲ್ಲಿ ತನ್ನ ಹೊಕ್ಕುಳಬಳ್ಳಿ ಹುಟ್ಟುವಾಗಲೇ ಸಾವನ್ನಪ್ಪಿತು ಎಂದು ಹೇಳಿಕೊಳ್ಳುವ ಒಬ್ಬ ತಾಯಿಯೂ ಸಿಗುವುದಿಲ್ಲ. ಯಾಕೆಂದರೆ ಈ ಹಳ್ಳಿಯಲ್ಲಿ ಜನ್ಮ ನೀಡಿದರೆ ಮಗು ಸಾಯುತ್ತದೆ ಎನ್ನುವ ನಂಬಿಕೆಯಿಂದ ಬೇರೊಂದು ಹಳ್ಳಿಗೆ ಹೋಗಿಯೇ ಹೆರಿಗೆ ಮಾಡಿಸಿಕೊಂಡು ಬರುತ್ತಾರೆ ಮಹಿಳೆಯರು. ಹಾಗಾಗಿ ಪ್ರತಿ ಗರ್ಭಿಣಿಯೂ ಸಂಪ್ರದಾಯದ ಹೆಸರಲ್ಲಿ ಹಳ್ಳಿ ತೊರೆಯಲೇಬೇಕು ಎನ್ನುವ ನೋವು ಅನುಭವಿಸುತ್ತಿದ್ದಾರೆ.

ಎತ್ತಿನ ಬಂಡಿಯಲ್ಲಿ ಮಗಳ ಜನನ: ಇದೇ ಹಳ್ಳಿಯಲ್ಲೇ ನೆಲೆಸಿರುವ ಸಾವಿತ್ರಿ ಬಾಯಿ ತಮ್ಮ ಅನುಭವ ಹಂಚಿಕೊಳ್ಳುತ್ತಾ, 'ನನ್ನ ಅತ್ತಿಗೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಎತ್ತಿನ ಗಾಡಿಯಲ್ಲಿ ಊರಿನಿಂದ ಹೊರಗೆ ಕರೆದುಕೊಂಡು ಹೋಗಿ, ಹೆರಿಗೆ ಮಾಡಿಸಿ ಮತ್ತೆ ಮನೆಗೆ ಹಿಂದಿರುಗಿದ್ದೆವು. ಆಗ ವಾಹನದ ಸೌಲಭ್ಯ ಇರಲಿಲ್ಲ. ಆದರೀಗ ಎಲ್ಲ ವ್ಯವಸ್ಥೆ ಇದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಊರಿನ ಗಡಿಭಾಗದ ಹೊರಗೆ ತೇಗದ ಎಲೆಗಳ ಚಪ್ಪರ ಹಾಕಿದ ಜಾಗದಲ್ಲಿ ಮಕ್ಕಳಿಗೆ ಜನ್ಮ ನೀಡುತ್ತಾರೆ' ಎಂದರು.

ಸಾವು, ಬದುಕಿನ ಪ್ರಶ್ನೆ: ಈ ಹಳ್ಳಿಯಲ್ಲಿ ಈ ಬಗೆಗಿನ ಮೂಢನಂಬಿಕೆ ಎಷ್ಟು ಆಳವಾಗಿದೆ ಎಂದರೆ ದ್ವಿತೀಯ ಪಿಯುಸಿ ಓದುವ ಹುಡುಗಿಯೂ ತನ್ನ ಅಜ್ಜಿಯಂತೆಯೇ ಈ ಸಂಪ್ರದಾಯವನ್ನು ಪಾಲಿಸುತ್ತಾಳೆ. ಅದಕ್ಕೆ ಕಾರಣವೂ ಇದೆಯಂತೆ. ಅದೇನೆಂದರೆ, ಹತ್ತು ವರ್ಷಗಳ ಹಿಂದೆ ಒಬ್ಬ ಗರ್ಭಿಣಿ ನೋವು ಕಾಣಿಸಿಕೊಂಡಿರುವುದನ್ನು ತಡವಾಗಿ ಹೇಳಿದ ಕಾರಣ, ಹಳ್ಳಿಯಿಂದ ಹೊರ ಹೋಗಲು ಸಾಧ್ಯವಾಗದೆ ಅದೇ ಹಳ್ಳಿಯಲ್ಲಿ ಹೆರಿಗೆಯಾಗಿತ್ತು. ಆದರೆ ಹೆರಿಗೆ ವೇಳೆ ಮಗು ಸಾವನ್ನಪ್ಪಿದೆ. ಈ ಘಟನೆಯನ್ನೇ ಗಟ್ಟಿಯಾಗಿ ನಂಬಿಕೊಂಡಿರುವ ಇಲ್ಲಿನ ಜನ ಮತ್ತೆ ಆ ತಪ್ಪನ್ನು ಮಾಡಲು ಹೋಗಲೇ ಇಲ್ಲ.

ಆಸ್ಪತ್ರೆಯೂ ಇಲ್ಲ: ವಿಶೇಷವೆಂದರೆ, ಈ ಮೂಢನಂಬಿಕೆಯಿಂದ ತಾಯಿಯಾಗಲಿ, ಮಗುವಾಗಲಿ ಪ್ರಾಣ ಕಳೆದುಕೊಂಡ ಉದಾಹರಣೆಯೇ ಸಿಗುವುದಿಲ್ಲ. ಗ್ರಾಮ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಕೂಡ ಇವರ ಮೂಢನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂಬುದೇ ಇಲ್ಲಿ ಬೇಸರ ಹುಟ್ಟಿಸುವ ಸಂಗತಿ.

ಯೋಜನೆಗಳಿಂದ ವಂಚಿತ ಗ್ರಾಮಸ್ಥರು: 'ಗರ್ಭಿಣಿಯರು, ಬಾಣಂತಿಯರು, ಶಿಶುಗಳಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿವೆ. ಜನನಿ ಸುರಕ್ಷಾ ಯೋಜನೆಯಂತಹ ಸೌಲಭ್ಯಗಳು ಹಲವು ವರ್ಷಗಳಿಂದ ಇಲ್ಲಿನ ಮಹಿಳೆಯರಿಗೆ ದೊರೆತೇ ಇಲ್ಲ. ಬಹುತೇಕ ಮಹಿಳೆಯರಿಗೆ ಆಸ್ಪತ್ರೆಯ ಬದಲಾಗಿ ಗ್ರಾಮದ ಹೊರಗೆ ಅಥವಾ ಬಯಲು ಪ್ರದೇಶದಲ್ಲಿ ನಿರ್ಮಿಸಲಾದ ಕೊಠಡಿಯಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ. ಹೆರಿಗೆಯಾಗಿರುವ ಅಥವಾ ಮಗು ಜನಿಸಿರುವ ಕುರಿತು ಯಾವುದೇ ಸರ್ಕಾರಿ ಪುಟಗಳಲ್ಲಿ ದಾಖಲಾಗುವುದಿಲ್ಲ. ಸರ್ಕಾರ ಸೌಲಭ್ಯವನ್ನು ನೀಡುವುದಿದ್ದರೂ ಅದನ್ನು ಗ್ರಾಮ ಗಡಿಯ ಹೊರಗೆ ವ್ಯವಸ್ಥೆ ಮಾಡಬೇಕು' ಎನ್ನುತ್ತಾರೆ ಈ ಹಳ್ಳಿಯ ರಾಣಿಬಾಯಿ.

ಗ್ರಾಮದ ಗೋಪಾಲ್ ಗುರ್ಜರ್ ಮಾತನಾಡಿ, 'ಇಲ್ಲಿ ಶತಮಾನಗಳಷ್ಟು ಹಳೆಯದಾದ ಸಂಕ ಶ್ಯಾಮ ದೇವಸ್ಥಾನವಿದೆ. ಇಲ್ಲಿ ನಮ್ಮ ತಂದೆ ತಾತಂದಿರು ಪೂಜೆ ಮಾಡಿದ್ದರು. ದೇವಾಲಯದ ಪಾವಿತ್ರ್ಯತೆಗಾಗಿ ಯಾವುದೇ ಮಹಿಳೆ ಹೆರಿಗೆಯ ನಂತರದ ಸೂತಕದ ಸಮಯವನ್ನು ಈ ಹಳ್ಳಿಯಲ್ಲಿ ಕಳೆಯುವುದಿಲ್ಲ. ಹಾಗಾಗಿ ಈ ನಿರ್ಬಂಧವನ್ನು ಅಂದಿನಿಂದಲೂ ಮುಂದುವರಿಸಿಕೊಂಡು ಬರಲಾಗಿದೆ. ಇಂಥ ನಂಬಿಕೆಯಿಂದಾಗಿ ಹಳ್ಳಿಯಲ್ಲಿ ಆಸ್ಪತ್ರೆಯ ಸೌಲಭ್ಯವೂ ಇಲ್ಲ. ಮಳೆಗಾಲದಲ್ಲಂತೂ ನೀರು ತುಂಬಿ ಮಹಿಳೆಯರು ಹೆರಿಗಾಗಿ ದೂರ ಹೋಗಬೇಕಾಗುತ್ತದೆ' ಎನ್ನುತ್ತಾರೆ.

ಮೂಢನಂಬಿಕೆಯಿಂದ ನಲುಗಿದ ಗ್ರಾಮ: ಕಾಲದ ಓಟದಲ್ಲಿ ನಗರಗಳ ಜೊತೆ ಜೊತೆಗೆ ಹಳ್ಳಿಗಳೂ ಬದಲಾಗುತ್ತಿವೆ. ನಂಬಿಕೆ, ಸಂಪ್ರದಾಯಗಳು ಬದಲಾಗಿವೆ. ಆ ಬದಲಾವಣೆಯ ಗಾಳಿ ಸಂಕ ಶ್ಯಾಮ ಗ್ರಾಮಕ್ಕೂ ಬೀಸಿದೆ. ಪ್ರಪಂಚದ ಇತರೆಡೆಗಳಂತೆಯೇ ಹೊಸ ಬಣ್ಣಗಳೊಂದಿಗೆ ತನ್ನನ್ನು ತಾನು ಈ ಗ್ರಾಮ ಬದಲಾಯಿಸಿಕೊಂಡಿದೆ. ಆದರೆ ಈ ಮೂಢನಂಬಿಕೆ ಮಾತ್ರ ಶತಮಾನ ಕಳೆದರೂ ಬದಲಾಗದೆ ಉಳಿದಿದೆ. ಮಗುವಿನ ಆ ಮೊದಲ ಅಳುವಿನ ಸಂಭ್ರಮ ಇಲ್ಲಿಲ್ಲ!.

ಇದನ್ನೂ ಓದಿ: ನಾಲಿಗೆ ಕಟ್​ ಮಾಡಿ ದೇವಿಗೆ ಅರ್ಪಿಸಿದ 20 ವರ್ಷದ ಯುವತಿ!

Last Updated : Nov 13, 2022, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.