ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. 2019ರ ಫೆಬ್ರವರಿಯಲ್ಲಿ ಜೆಟ್ ವಿಮಾನದಲ್ಲಿ ಪಾಕ್ ಗಡಿಯೊಳಗೆ ಬಿದ್ದು, ಮೂರು ದಿನಗಳ ಕಾಲ ಪಾಕ್ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಅಭಿನಂದನ್ ಅವರನ್ನು ಭಾರತ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸಿ, ಬಿಡಿಸಿಕೊಂಡು ಬಂದಿತ್ತು.
ಯುದ್ಧಕಾಲದ ಮೂರನೇ ಅತ್ಯುನ್ನತ ಪುರಸ್ಕಾರವಾದ ವೀರಚಕ್ರ ಪಡೆದಿರುವ ಅಭಿನಂದನ್ ಮಿಗ್-21ರ ಜೆಟ್ನಿಂದ ಪಾಕಿಸ್ತಾನದ ಎಫ್-16 ಫೈಟರ್ ಜೆಟ್ ಅನ್ನು ಉರುಳಿಸಿ ಸಾಕಷ್ಟು ಸುದ್ದಿಯಾಗಿದ್ದರು. ಇದೇ ವೇಳೆ ಮಿಗ್ ಅಪಘಾತಕ್ಕೀಡಾಗಿ ಪಾಕ್ ಭೂಪ್ರದೇಶದೊಳಗೆ ಅಭಿನಂದನ್ ಉರುಳಿಬಿದ್ದಿದ್ದರು.
ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಬಾಲಕೋಟ್ ಮೇಲೆ ದಾಳಿ ನಡೆಸಿದ ನಂತರ ಈ ಬೆಳವಣಿಗೆಗಳು ಕಂಡುಬಂದಿದ್ದವು. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಭಯೋತ್ಪಾದನಾ ಸಂಘಟನೆಗಳ ಕ್ಯಾಂಪ್ಗಳ ಮೇಲೆ ಭಾರತೀಯ ಸೇನೆ ವಾಯುದಾಳಿ ನಡೆಸಿತ್ತು.
ಇನ್ನು ತಮಿಳುನಾಡು ಮೂಲದವರಾದ ಅಭಿನಂದನ್ ವರ್ಧಮಾನ್ ಭಾರತೀಯ ವಾಯುಪಡೆಯ ಭಟಿಂಡಾ ಮತ್ತು ಹಲ್ವಾರಾದಲ್ಲಿ ತರಬೇತಿ ಪಡೆದು, ವಾಯುಪಡೆಗೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: ಕಾಕತಾಳೀಯವೋ, 'ಸತಿ'ಯ ಶಾಪವೋ: ಈ ಗ್ರಾಮದಲ್ಲಿ ದೀಪಾವಳಿಯೇ ಆಚರಿಸಲ್ಲ