ETV Bharat / bharat

ಬಕ್ರೀದ್: ಬದರಿನಾಥ್​ ಧಾಮದ ಬದಲಿಗೆ ಈ ಬಾರಿ ಜೋಶಿಮಠದಲ್ಲಿ ನಮಾಜ್ - ಈಟಿವಿ ಭಾರತ್ ಕನ್ನಡ ಸುದ್ದಿ

ಈ ಸಲದ ಬಕ್ರೀದ್ ಹಬ್ಬದ​ ಸಮಯದಲ್ಲಿ ಬದರಿನಾಥ್​ ಮತ್ತು ಸುತ್ತಮುತ್ತ ಮುಸ್ಲಿಮರು ನಮಾಜ್ ಮಾಡುವುದಿಲ್ಲ. ಇದಕ್ಕೆ ಬದಲಾಗಿ ಅಲ್ಲಿಂದ 45 ಕಿ.ಮೀ ದೂರವಿರುವ ಜೋಶಿಮಠದಲ್ಲಿ ಆಚರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬದರಿನಾಥ್​
ಬದರಿನಾಥ್​
author img

By

Published : Jun 28, 2023, 10:07 PM IST

ಚಮೋಲಿ (ಉತ್ತರಾಖಂಡ) : ಚಾರ್ ಧಾಮ್ ದೇಗುಲವಿರುವ ದೇವಾಲಯ ಪಟ್ಟಣ ಬದರಿನಾಥ್ ಮತ್ತು ಸುತ್ತಮುತ್ತ ಗುರುವಾರ ಈದ್ ಅಲ್-ಅಧಾ ಅಥವಾ ಬಕ್ರೀದ್ ಸಮಯದಲ್ಲಿ ಮುಸ್ಲಿಮರು ನಮಾಜ್ ಮಾಡುವುದಿಲ್ಲ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ತಮ್ಮ ಹಬ್ಬವನ್ನು ದೇವಸ್ಥಾನದಿಂದ 45 ಕಿಮೀ ದೂರದಲ್ಲಿರುವ ಜೋಶಿಮಠದಲ್ಲಿ ಆಚರಿಸುತ್ತಾರೆ. ಈ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ನಡುವೆ ಪರಸ್ಪರ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಹಿಂದೂ ಸಂಘಟನೆಗಳು ಮತ್ತು ಠಾಣಾ ಬದರಿನಾಥ ಮುಸ್ಲಿಮರು ನಡೆಸಿದ ಸಭೆಯಲ್ಲಿ, ಬದರಿನಾಥ ವ್ಯಾಪಾರ ಸಭೆಯ ಸದಸ್ಯರು, ಪಾಂಡ ಪುರೋಹಿತ್, ತೀರ್ಥ ಪುರೋಹಿತ್, ಬದರಿನಾಥ ಧಾಮದಲ್ಲಿ ವಿವಿಧ ಕಾಮಗಾರಿಗಳಲ್ಲಿ ತೊಡಗಿರುವ ಗುತ್ತಿಗೆದಾರರು ಭಾಗವಹಿಸಿದ್ದರು. ಕಳೆದ ವರ್ಷ ಮುಸ್ಲಿಂ ಕಾರ್ಮಿಕರು ನಮಾಜ್ ಮಾಡಿದ ನಂತರ ವಿವಾದ ಭುಗಿಲೆದ್ದಿತ್ತು. ಈದ್ ಅಲ್-ಅಧಾ ಸಂದರ್ಭದಲ್ಲಿ ಮುಸ್ಲಿಂ ಕಾರ್ಮಿಕರು ಬದರಿನಾಥ್ ಧಾಮ್‌ನಲ್ಲಿ ನಮಾಜ್ ಸಲ್ಲಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸುದ್ದಿಯ ಪ್ರಸಾರದ ನಂತರ ಕೋಮು ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಮತ್ತು ಆಡಳಿತ ಮಂಡಳಿ ಮಧ್ಯಪ್ರವೇಶಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಈದ್ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಇರಲಿಲ್ಲ: ಈ ಬಾರಿಯೂ ನಮಾಜ್ ಪುನರಾವರ್ತನೆಯಾಗಬಾರದು ಎಂದು ಪಾಂಡ ಸಮುದಾಯ ಆಗ್ರಹಿಸಿದೆ. ಬದರಿನಾಥ್ ಪೊಲೀಸ್ ಠಾಣೆಯ ಉಸ್ತುವಾರಿ ಲಕ್ಷ್ಮಿ ಪ್ರಸಾದ್ ಬಿಲ್ಜ್ವಾನ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಾಂಡ ಸಮುದಾಯವು ಬದರಿನಾಥ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಬಾರದು ಎಂದು ಹೇಳಿತ್ತು. ಹಿಂದೂ ಮುಖಂಡರ ಪ್ರಕಾರ, ಇಲ್ಲಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯ ಇರಲಿಲ್ಲ. ಬದರಿನಾಥ ಧಾಮವು ಹಿಂದೂಗಳ ಪವಿತ್ರ ಸ್ಥಳ. ಇಲ್ಲಿ ನಮಾಜ್‌ನಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.

ಬಕ್ರೀದ್ ಹಬ್ಬದ ಬಗ್ಗೆ: ಈ ಬಾರಿ ಬಕ್ರೀದ್ ಹಬ್ಬವನ್ನು ಜೂನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತಿದೆ. ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇತ್ತೀಚೆಗಷ್ಟೇ ಝಿಲ್ಹಿಜ್ ತಿಂಗಳಲ್ಲಿ ಚಂದ್ರ ದರ್ಶನವಾಗಿದ್ದು, ಇದೀಗ ಬಕ್ರೀದ್ ದಿನಾಚರಣೆಗೆ ಬಂದಿದೆ. ಈ ವರ್ಷ ಬಕ್ರೀದ್ ಅನ್ನು ಜೂನ್‌ 29 ರಂದು ಗುರುವಾರ ಆಚರಿಸಲಾಗುತ್ತದೆ.

ಇದನ್ನೂ ಓದಿ: Explained: ಹಜ್ ಯಾತ್ರೆ ಮಹತ್ವವೇನು? ಇತಿಹಾಸ ಏನು ಹೇಳುತ್ತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.