ETV Bharat / bharat

ಸಂಘಟನೆಯೊಂದರ ಕಾರ್ಯಕರ್ತನ ಹತ್ಯೆ: ಪೋಸ್ಟ್​ ಶೇರ್​ ಮಾಡಿ ಕೊಲೆ ಹೊಣೆ ಹೊತ್ತ ಯುವಕ - ಬಜರಂಗದಳದ ಇಲಾಖಾ ಸಂಚಾಲಕ ರಾಜೇಂದ್ರ

ಭಾನುವಾರ ರಾತ್ರಿ ಉದಯಪುರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಸಂಬಂಧ ಪೊಲೀಸರು ಶಂಕಿತ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

Bajrang Dal activist Rajendra alias Raju
ಬಜರಂಗದಳದ ಕಾರ್ಯಕರ್ತ ರಾಜೇಂದ್ರ ಅಲಿಯಾಸ್ ರಾಜು
author img

By

Published : Feb 7, 2023, 3:19 PM IST

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ರಾತ್ರಿ ಬಜರಂಗದಳ ಕಾರ್ಯಕರ್ತನನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಶಂಕಿತ ಆರೋಪಿಯನ್ನು ಕೂಡ ಬಂಧಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆಯಾದವರನ್ನು ಬಜರಂಗದಳದ ಕಾರ್ಯಕರ್ತ ರಾಜೇಂದ್ರ ಅಲಿಯಾಸ್ ರಾಜು (42) ಎಂದು ಗುರುತಿಸಲಾಗಿದೆ ಎಂದು ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೀಲ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.

ಈ ಘಟನೆ ನಗರದ ಅಂಬಾಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಛೇದಕದಲ್ಲಿ ನಡೆದಿದೆ. ಆಸ್ತಿ ವಿವಾದದ ಆರೋಪದ ಹಿನ್ನೆಲೆ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಕೊಲೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜು ಅವರು ನಗರದ ಅಂಬಾಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಛೇದಕದಲ್ಲಿರುವ ತಮ್ಮ ಅಂಗಡಿಯಿಂದ ಹೊರಗೆ ಬರುತ್ತಿದ್ದಾಗ ರಾತ್ರಿ ಸಮಯದಲ್ಲಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ಹತ್ಯೆಯಾದ ಸ್ಥಳದ ಸಮೀಪದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ ಸಿಸಿಟಿವಿ ಕ್ಯಾಮರಾದಲ್ಲಿ ಇಬ್ಬರು ಯುವಕರು ವೇಗವಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದ್ದು, ಇವರಿಬ್ಬರನ್ನು ಪೊಲೀಸರು ಶಂಕಿತ ಆರೋಪಿಗಳೆಂದು ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಜರಂಗದಳದ ಇಲಾಖಾ ಸಂಚಾಲಕ ರಾಜೇಂದ್ರ ಅಲಿಯಾಸ್ ರಾಜು ಅವರು ಅಂಗಡಿಯಿಂದ ಹೊರಬಂದು ತಮ್ಮ ಕಾರಿನ ಕಡೆಗೆ ಫೋನ್​ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ವೇಳೆ ಅಲ್ಲಿ ಒಂದು ಮೆರವಣಿಗೆ ಸಾಗುತ್ತಿತ್ತು. ಆ ಮೆರವಣಿಗೆಯ ಲಾಭ ಪಡೆದ ಆರೋಪಿಗಳು ಕೃತ್ಯ ಎಸಗಿ ನಿಧಾನವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೋರಾದ ಬ್ಯಾಂಡ್​ ಸದ್ದಿನಿಂದಾಗಿ ದೂರದಲ್ಲಿ ನಿಂತಿದ್ದವರಿಗೂ ಗುಂಡಿನ ದಾಳಿಯ ಶಬ್ದ ಕೇಳಿಸಿಲ್ಲ. ಆದರೆ, ರಸ್ತೆಯಲ್ಲಿ ಬಿದ್ದಿದ್ದ ರಾಜು ಅವರನ್ನು ಕಂಡ ತಕ್ಷಣ ಜನರು ಆತನನ್ನು ಉದಯಪುರದ ಎಂಬಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ದಾರಿಮಧ್ಯೆದಲ್ಲಿಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಎಂ.ಬಿ.ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದರು.

ಕೊಲೆಯ ಹೊಣೆ ಹೊತ್ತ ಯುವಕ: ಮತ್ತೊಂದೆಡೆ, ಹತ್ಯೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗಿದ್ದು, ಇದರಲ್ಲಿ ಬಂಟಿ ಎಂಬ ಯುವಕ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಕೊಲೆಯ ಹೊಣೆ ಹೊತ್ತುಕೊಂಡಿದ್ದಾನೆ. ರಾಜು ತನ್ನ ಮಾವನ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಕಬಳಿಸಲು ಬಯಸಿದ್ದ. ಅದಕ್ಕಾಗಿ ಆತನನ್ನು ಕೊಲೆ ಮಾಡಿದೆನು ಎಂದು ಬರೆದುಕೊಂಡಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಯುವಕ ತನ್ನ ಸಾಮಾಜಿಕ ಮಾಧ್ಯಮ ಖಾತೆಯಿಂದ ಈ ಪೋಸ್ಟ್ ಡಿಲಿಟ್​ ಮಾಡಿದ್ದಾನೆ.

ರಾಜೇಂದ್ರ ಅಲಿಯಾಸ್ ರಾಜು ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಒಂದು ಗುಂಡು ರಾಜೇಂದ್ರ ಪರ್ಮಾರ್ ಅವರ ತಲೆಗೆ ತಗುಲಿತ್ತು. ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ. ಸದ್ಯ ಕೊಲೆಗೆ ಕಾರಣ ಸ್ಪಷ್ಟವಾಗಿಲ್ಲ. ಆದಾಗ್ಯೂ ಕೊಲೆಯಾದ ರಾಜು ಪರಿಚಿತರೊಬ್ಬರೊಂದಿಗೆ ಆಸ್ತಿ ವಿವಾದದಲ್ಲಿ ಸಿಲುಕಿಕೊಂಡಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಆಸ್ತಿ ಸಂಬಂಧ ವೈಷಮ್ಯದಿಂದ ಈ ಕೊಲೆ ನಡೆದಿರುವುದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ. ರಾಜೇಂದ್ರ ಪರ್ಮಾರ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಚಿನ್ನಾಭರಣ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದು ಸಿಬ್ಬಂದಿ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.